ADVERTISEMENT

ಪಾಕ್‌ನಿಂದ ಮತ್ತೆ ಗುಂಡಿನ ದಾಳಿ: ಮೂವರು ಯೋಧರಿಗೆ ಗಾಯ

ಪಿಟಿಐ
Published 9 ಫೆಬ್ರುವರಿ 2018, 19:37 IST
Last Updated 9 ಫೆಬ್ರುವರಿ 2018, 19:37 IST

ಜಮ್ಮು: ಪೂಂಛ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಮತ್ತೆ ಗುಂಡಿನ ದಾಳಿ ನಡೆಸಿದ್ದು, ಮೂವರು ಭಾರತೀಯ ಯೋಧರಿಗೆ ಸಣ್ಣ–ಪುಟ್ಟ ಗಾಯಗಳಾಗಿವೆ.

ಪೂಂಛ್‌ನ ಕೃಷ್ಣಘಾಟಿ ವಲಯದಲ್ಲಿ ಪಾಕಿಸ್ತಾನವು ಗುರುವಾರ ರಾತ್ರಿಯಿಡೀ ಗುಂಡಿನ ಹಾಗೂ ಷೆಲ್‌ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಗುರುವಾರ ಪಾಕಿಸ್ತಾನವು ನಡೆಸಿದ್ದ ಷೆಲ್‌ ದಾಳಿಯಲ್ಲಿ 45  ವರ್ಷದ ಮಹಿಳೆ ಮತಪಟ್ಟಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.