ADVERTISEMENT

ಹಿಟ್ಲರ್ ಭಾರತದ ಪ್ರಾಚೀನ ಪುಸ್ತಕಗಳನ್ನು ಓದಿದ್ದ, ಟೈಮ್ ಮೆಷಿನ್ ತಯಾರಿಸುವ ಇಚ್ಚೆ ಹೊಂದಿದ್ದ : ನಿಯತಕಾಲಿಕೆ ಶಿವಿರಾದಲ್ಲಿ ಈ ಅಂಶ ಪ್ರಕಟ

ಏಜೆನ್ಸೀಸ್
Published 10 ಫೆಬ್ರುವರಿ 2018, 16:33 IST
Last Updated 10 ಫೆಬ್ರುವರಿ 2018, 16:33 IST
ಹಿಟ್ಲರ್ ಭಾರತದ ಪ್ರಾಚೀನ ಪುಸ್ತಕಗಳನ್ನು ಓದಿದ್ದ, ಟೈಮ್ ಮೆಷಿನ್ ತಯಾರಿಸುವ ಇಚ್ಚೆ ಹೊಂದಿದ್ದ : ನಿಯತಕಾಲಿಕೆ ಶಿವಿರಾದಲ್ಲಿ ಈ ಅಂಶ ಪ್ರಕಟ
ಹಿಟ್ಲರ್ ಭಾರತದ ಪ್ರಾಚೀನ ಪುಸ್ತಕಗಳನ್ನು ಓದಿದ್ದ, ಟೈಮ್ ಮೆಷಿನ್ ತಯಾರಿಸುವ ಇಚ್ಚೆ ಹೊಂದಿದ್ದ : ನಿಯತಕಾಲಿಕೆ ಶಿವಿರಾದಲ್ಲಿ ಈ ಅಂಶ ಪ್ರಕಟ   

ಜೈಪುರ:  ಜರ್ಮನಿಯ 'ನಾಜಿ' ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಲರ್ ಭಾರತದ ಪ್ರಾಚೀನ ಪುಸ್ತಕಗಳನ್ನು ಓದಿದ್ದನು. ಟೈಮ್ ಮೆಷಿನ್ ತಯಾರಿಸುವ ಇಚ್ಚೆ ಹೊಂದಿದ್ದನು ಎಂಬ ಅಂಶ ರಾಜಸ್ತಾನದ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿಯತಕಾಲಿಕೆ ಶಿವಿರಾದಲ್ಲಿ ಪ್ರಕಟವಾಗಿದೆ.

ಬಿಕನೇರ್‌ನಲ್ಲಿನ ಸರ್ಕಾರಿ ಶಾಲಾ ಶಿಕ್ಷಕ ದೀಪಕ್ ಮಿಶ್ರಾ ಅವರು ಶಿವಿರಾ ನಿಯತಕಾಲಿಕೆಗೆ ಬರೆದಿರುವ ಪ್ರಾಚೀನ ಭಾರತ್ ಔರ್ ವಿಜ್ಞಾನ (Ancient India and science) ಎಂಬ ಲೇಖನದಲ್ಲಿ ಈ ಅಂಶ ಪ್ರಸ್ತಾಪವಾಗಿದೆ.

ಅಲ್ಲದೇ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೀನ್ ಪ್ರಾಚೀನ ಭಾರತದ ಪುಸ್ತಕಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದನು. ರೈಟ್ ಸಹೋದರರು ಅವರು ವಿಮಾನ ತಯಾರಿಸುವ ಸಾವಿರ ವರ್ಷಗಳ ಮೊದಲೇ ಮಹರ್ಷಿ ಭಾರಧ್ವಾಜ್ ಅವರು ಬರೆದಿರುವ  ವೈಮಾನಿಕ ಶಾಸ್ತ್ರ ಪುಸ್ತಕದಲ್ಲೇ ವಿಮಾನ ರಚನೆ ಮತ್ತು ತಯಾರಿಕೆಯ ಬಗ್ಗೆ ಮಾಹಿತಿ ಇತ್ತು ಎಂದು ಬರೆಯಲಾಗಿದೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದ ಶಿವಿರಾ ಪತ್ರಿಕೆಯ ಹಿರಿಯ ಸಂಪಾದಕ ಜಯಪಾಲ್ ಸಿಂಗ್ ಅವರು, ಪುಸ್ತಕದಲ್ಲಿ ಲೇಖಕರು ಏನೇ ಬರೆದಿರಲಿ ಅದು ಅವರ ವೈಯಕ್ತಿಕ ಅಭಿಪ್ರಾಯ. ವ್ಯಾಕರಣ ತಿದ್ದುಪಡಿ ಹೊರತಾಗಿ ಅವರ ಲೇಖನವನ್ನು ವಿರೂಪಗೊಳಿಸಬಾರದು ಎಂದು ಹೇಳಿದ್ದಾರೆ.

ಹಿಟ್ಲರ್ ಪ್ರಾಚೀನ ಪುಸ್ತಕಗಳನ್ನು ಓದಿರುವ ಅಂಶ ಕುರಿತು ಮತ್ತು ಟೈಮ್ ಮೆಷಿನ್ ತಯಾರಿಸುವ ಆತನ ಇಚ್ಛೆ ಬಗೆಗಿನ ಮಾಹಿತಿಗಾಗಿ ನಾನು ಹಲವಾರು ವೆಬ್‌ಸೈಟ್‌ಗಳನ್ನು ಹುಡುಕಾಡಿದೆ. ಅಲ್ಲದೇ ಜರ್ಮನ್ನರು ತೆಗೆದುಕೊಂಡು ಹೋದ ನಮ್ಮ ಪ್ರಾಚೀನ ಪುಸ್ತಕ ಸ್ವಸ್ತಿಕ್‌ನಲ್ಲಿಯೂ ಈ ಬಗ್ಗೆ ನೋಡಿದ್ದೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.