ADVERTISEMENT

ಅಬ್ದುಲ್ ಕಲಾಂ ನಿವಾಸ ಭೇಟಿಯಲ್ಲಿ ರಾಜಕೀಯವಿಲ್ಲ: ಕಮಲಹಾಸನ್

ಏಜೆನ್ಸೀಸ್
Published 21 ಫೆಬ್ರುವರಿ 2018, 9:04 IST
Last Updated 21 ಫೆಬ್ರುವರಿ 2018, 9:04 IST
ಕಮಲಹಾಸನ್ (ಚಿತ್ರ ಕೃಪೆ – ಟ್ವಿಟರ್)
ಕಮಲಹಾಸನ್ (ಚಿತ್ರ ಕೃಪೆ – ಟ್ವಿಟರ್)   

ರಾಮೇಶ್ವರ: ಮಾಜಿ ರಾಷ್ಟ್ರಪತಿ, ವಿಜ್ಞಾನಿ ದಿವಂಗತ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ನಿವಾಸಕ್ಕೆ ಭೇಟಿ ನೀಡಿರುವುದರಲ್ಲಿ ರಾಜಕೀಯ ಉದ್ದೇಶವಿಲ್ಲ ಎಂದು ನಟ ಕಮಲಹಾಸನ್ ಹೇಳಿದ್ದಾರೆ.

ತಮ್ಮ ರಾಜಕೀಯ ಪಕ್ಷದ ಉದ್ಘಾಟನೆ ಹಿನ್ನೆಲೆಯಲ್ಲಿ ಅವರು ಇಲ್ಲಿರುವ ಕಲಾಂ ನಿವಾಸಕ್ಕೆ ಬುಧವಾರ ಬೆಳಿಗ್ಗೆ ಭೇಟಿ ನೀಡಿದ್ದರು. ಕಲಾಂ ಅವರ ಹಿರಿಯಣ್ಣನಿಂದ ಆಶೀರ್ವಾದ ಪಡೆದಿದ್ದರು. ನಂತರ ಕಲಾಂ ಅವರು ಕಲಿತಿದ್ದ ಶಾಲೆಗೆ ಭೇಟಿ ನೀಡಲು ಉದ್ದೇಶಿಸಿದ್ದರು. ಆದರೆ, ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಮಲಹಾಸನ್, ‘ಕಲಾಂ ಅವರು ನನ್ನ ಪಾಲಿಗೆ ಪ್ರಮುಖ ವ್ಯಕ್ತಿ. ಅವರ ದೇಶಭಕ್ತಿ ಮತ್ತು ಮಹತ್ವಾಕಾಂಕ್ಷೆಗಳಿಂದ ಆಕರ್ಷಿತನಾಗಿದ್ದೆ. ಅವರ ಮನೆಗೆ ಭೇಟಿ ನೀಡಿದ್ದರಲ್ಲಿ ರಾಜಕೀಯ ಉದ್ದೇಶವಿಲ್ಲ. ಶಾಲೆ ಭೇಟಿಯ ಹಿಂದೆಯೂ ರಾಜಕೀಯವಿಲ್ಲ. ನನ್ನನ್ನು ಶಾಲೆಗೆ ಹೋಗದಂತೆ ತಡೆಯಬಹುದೇ ವಿನಃ ಕಲಿಯದಂತೆ ತಡೆಯಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.