ADVERTISEMENT

ಅಸ್ಸಾಂ: ಅಲ್‌ಕೈದಾ ಸಂಘಟನೆಯ 6 ಶಂಕಿತರು ಪೊಲೀಸ್ ಬಲೆಗೆ

ಪಿಟಿಐ
Published 16 ಏಪ್ರಿಲ್ 2022, 15:34 IST
Last Updated 16 ಏಪ್ರಿಲ್ 2022, 15:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬರ್ಪೇಟಾ, ಅಸ್ಸಾಂ: ನೆರೆಯ ಬಾಂಗ್ಲಾದೇಶದಲ್ಲಿಅಲ್‌ಕೈದಾ ಭಯೋತ್ಪಾದಕ ಸಂಘಟನೆಯ ಜೊತೆ ನಂಟು ಹೊಂದಿದ್ದ 6 ಮಂದಿ ಶಂಕಿತರನ್ನು ಅಸ್ಸಾಂನ ಬರಪೇಟಾ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣವೊಂದರ ಸಂಬಂಧ ಮಾರ್ಚ್ 4ರಂದು ಬಂಧಿಸಲಾಗಿದ್ದ ಜಿಹಾದಿ ವ್ಯಕ್ತಿ ನೀಡಿದ್ದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ, ಮದರಸಾವೊಂದರಲ್ಲಿದ್ದ 6 ಮಂದಿ ಶಂಕಿತರನ್ನು ಶುಕ್ರವಾರ ಬಂಧಿಸಲಾಗಿದೆ.ಬಂಧಿತರೆಲ್ಲರೂ ಭಾರತದ ಉಪಖಂಡದಅಲ್‌ಕೈದಾ ಸಂಘಟನೆಯ ಸದಸ್ಯನಾದ ಮೊಹಮ್ಮದ್ ಸುಮನ್ ಅಲಿಯಾಸ್ ಸೈಫುಲ್ ಇಸ್ಲಾಂ ಅಲಿಯಾಸ್ ಹರುಣ್ ರಶೀದ್ ಜೊತೆ ನೇರ ಸಂಪರ್ಕ ಹೊಂದಿದ್ದಾರೆ ಎಂದು ಶನಿವಾರ ಪೊಲೀಸ್ ಅಧೀಕ್ಷಕ ಅಮಿತವಾ ಸಿನ್ಹಾ ಅವರು ಮಾಹಿತಿ ನೀಡಿದರು.

ಶಂಕಿತ ಭಯೋತ್ಪಾದಕ ಪ್ರಕರಣವೊಂದರ ಸಂಬಂಧ ಮಾರ್ಚ್ 4ರಂದು ಬಾಂಗ್ಲಾದೇಶದ ನಾಗರಿಕ ಸೇರಿದಂತೆ ಐದು ಮಂದಿಯನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.