ADVERTISEMENT

62 ರೂಪಾಯಿಗೆ ಮಗು ಮಾರಾಟ

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 19:30 IST
Last Updated 16 ಜುಲೈ 2012, 19:30 IST

ಅರಾರಿಯ (ಬಿಹಾರ) (ಪಿಟಿಐ): ಭಿಕ್ಷುಕ ತಾಯಿ ತನ್ನ 16 ತಿಂಗಳ ಮಗುವನ್ನು 62 ರೂಪಾಯಿಗೆ ನೇಪಾಳಿ ದಂಪತಿಗೆ ಮಾರಾಟ ಮಾಡಿರುವ ಘಟನೆ ಪೋರ್‌ಬೆಸ್ಗಂಜ್‌ನಲ್ಲಿ ನಡೆದಿದೆ ಎಂದು ಅರಾರಿಯದ ಪೊಲೀಸ್ ಅಧೀಕ್ಷಕ ಎಸ್. ಲಂಡೆ ತಿಳಿಸಿದ್ದಾರೆ. 

 ಅಂಗವಿಕಲ ಪತಿ, ಒಬ್ಬ ಮಗಳು ಹಾಗೂ ಅವಳಿಗಂಡು ಮಕ್ಕಳನ್ನು ಸಾಕುವುದು ದುಸ್ತರವಾದ ಕಾರಣ ಅವಳಿ ಮಕ್ಕಳಲ್ಲಿ ಒಂದು ಮಗುವನ್ನು  ಪೋರ್‌ಬೆಸ್ಗಂಜ್‌ನ ರೈಲ್ವೆ ನಿಲ್ದಾಣದ ಬಳಿ ಮಾರಾಟ ಮಾಡಿರುವುದಾಗಿ ಆಕೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.