ADVERTISEMENT

68ನೇ ಪುಣ್ಯತಿಥಿ: ರಾಜ್‌ಘಾಟ್‌ನಲ್ಲಿ ಗಾಂಧಿ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2016, 10:59 IST
Last Updated 30 ಜನವರಿ 2016, 10:59 IST
पूज्य बापू की पुण्यतिथि पर उनको शत् शत् नमन। Salutations to beloved Bapu on his Punya Tithi.— Narendra Modi (@narendramodi) January 30, 2016
पूज्य बापू की पुण्यतिथि पर उनको शत् शत् नमन। Salutations to beloved Bapu on his Punya Tithi.— Narendra Modi (@narendramodi) January 30, 2016   

ನವದೆಹಲಿ (ಪಿಟಿಐ):  ಮಹಾತ್ಮ ಗಾಂಧೀಜಿ ಅವರ 68ನೇ ಪುಣ್ಯತಿಥಿ ಅಂಗವಾಗಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಜ್‌ಘಾಟ್‌ಗೆ ತೆರಳಿ ರಾಷ್ಟ್ರಪಿತನ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.

ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ, ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌, ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಕೂಡ ಇದ್ದರು. ಪುಣ್ಯಸ್ಮರಣೆ ಭಾಗವಾಗಿ ರಾಜ್‌ಘಾಟ್‌ನಲ್ಲಿ ಸರ್ವ ಧರ್ಮ ಪ್ರಾರ್ಥನೆ ಹಮ್ಮಿಕೊಳ್ಳಲಾಗಿತ್ತು.

‘ಪುಣ್ಯತಿಥಿಯಂದು ರಾಷ್ಟ್ರಪಿತನನ್ನು ಇಡೀ ದೇಶವೇ ಸ್ಮರಿಸಿಕೊಳ್ಳುತ್ತಿದೆ. ಪ್ರೀತಿಯ ಬಾಪುವಿಗೆ ಪ್ರಣಾಮ’ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT