ADVERTISEMENT

7ತಾಸು ಕರ್ಫ್ಯೂ ಸಡಿಲ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 19:59 IST
Last Updated 12 ಸೆಪ್ಟೆಂಬರ್ 2013, 19:59 IST

ಲಖನೌ (ಪಿಟಿಐ): ಮುಜಾಫರ್‌ ನಗರದ ಕೋಮು ಗಲಭೆ ಸಂಬಂಧ ಮುಂಜಾಗರೂಕತೆ ಕ್ರಮವಾಗಿ ಇದು ವರೆಗೆ ಸುಮಾರು 10 ಸಾವಿರ ಜನರನ್ನು ಬಂಧಿಸಲಾಗಿದೆ ಎಂದು ಕಾನೂನು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಅರುಣ್‌ ಕುಮಾರ್‌ ತಿಳಿಸಿದ್ದಾರೆ.

ಕರ್ಫ್ಯೂ ಸಡಿಲ: ಈ ಮಧ್ಯೆ ಗಲಭೆಪೀಡಿತ ಮುಜಾ ಫರ್‌ನಗರದಲ್ಲಿ ಪರಿಸ್ಥಿತಿ ಸಹಜ ವಾಗುತ್ತಿ ರುವುದರಿಂದ ಗುರುವಾರ ಕರ್ಫ್ಯೂವನ್ನು 7 ಗಂಟೆ ಕಾಲ ಸಡಿಲ ಗೊಳಿಸಲಾಗಿತ್ತು.

ಆಗ್ರಾ ವರದಿ: ಮುಜಾಫರ್‌ನಗರದ ಕೋಮುಗಲಭೆಗೂ 2002ರ ಗುಜರಾತ್‌ ಗೋಧ್ರಾ ಗಲಭೆಗೂ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಹೇಳಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್‌ ಅವರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಿ ಗಲಭೆ ಸಂತ್ರಸ್ತರಿಗೆ ನ್ಯಾಯ ಒದಗಿಸ ಲಾಗುವುದು ಎಂದು ಭರವಸೆ ನೀಡಿ ದರು.

ಕೋರ್ಟ್ ನೋಟಿಸ್‌ (ದೆಹಲಿ ವರದಿ): 38 ಜನರನ್ನು ಬಲಿ ತೆಗೆದುಕೊಂಡ ಮುಜಾಫರ್‌ನಗರದ ಕೋಮುಗಲಭೆ ಯನ್ನು ಸಿಬಿಐ ತನಿಖೆಗೆ ಒಪ್ಪಿಸಲು ನಿರ್ದೇಶನ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ  ಸುಪ್ರೀಂಕೋರ್ಟ್ ಕೇಂದ್ರ ಮತ್ತು ಉತ್ತರಪ್ರದೇಶ ಸರ್ಕಾರಕ್ಕೆ ನೋಟಿಸ್‌ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.