ನವದೆಹಲಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ 8,300 ಅಭ್ಯರ್ಥಿಗಳ ಪೈಕಿ ಶೇ 86ರಷ್ಟು ಮಂದಿ ಠೇವಣಿ ಕಳೆದುಕೊಂಡಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ಹಂಚಿಕೊಂಡಿದೆ.
ಚುನಾವಣಾ ಆಯೋಗದ ಅಂಕಿ ಅಂಶದ ಪ್ರಕಾರ, ಒಟ್ಟು 12,459 ನಾಮಪತ್ರಗಳು ಸಲ್ಲಿಕೆಯಾಗಿದ್ದವು. 2019ರಲ್ಲಿ 11,692 ನಾಮಪತ್ರ ಸಲ್ಲಿಕೆಯಾಗಿದ್ದವು.
ದೇಶದಾದ್ಯಂತ 12,459 ನಾಮಪತ್ರಗಳ ಪೈಕಿ ನಾಮಪತ್ರ ಹಿಂತೆಗೆತ, ತಿರಸ್ಕೃತ ಪ್ರಕ್ರಿಯೆ ಮುಗಿದ ಬಳಿಕ 8,360 ಮಂದಿ ಕಣದಲ್ಲಿ ಉಳಿದಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ 8,054 ಮಂದಿ ಸ್ಪರ್ಧಿಸಿದ್ದರು.
ಈ ಬಾರಿ ಕಣದಲ್ಲಿದ್ದ 8,360 ಅಭ್ಯರ್ಥಿಗಳ ಪೈಕಿ 7,190 ಮಂದಿ ಠೇವಣಿ ಕಳೆದುಕೊಂಡಿದ್ದಾರೆ. ಇದು ಶೇ 86ರಷ್ಟಿದೆ.
ಠೇವಣಿ ಕಳೆದುಕೊಂಡ 7,190 ಅಭ್ಯರ್ಥಿಗಳ ಪೈಕಿ 584 ಮಂದಿ 6 ಪ್ರಮುಖ ರಾಷ್ಟ್ರೀಯ ಪಕ್ಷಗಳಿಗೆ ಸೇರಿದವರಾಗಿದ್ದು, 68 ಮಂದಿ ಸ್ಥಳೀಯ ಪಕ್ಷದವರಾಗಿದ್ದಾರೆ. ನೋಂದಾಯಿತ, ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ 2,633 ಮಂದಿ ಮತ್ತು 3,095 ಪಕ್ಷೇತರ ಅಭ್ಯರ್ಥಿಗಳು ಸೇರಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ 6923 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.