ADVERTISEMENT

ದೆಹಲಿಯಲ್ಲಿ ಹೋಟೆಲ್‌ಗೆ ಬೆಂಕಿ: 15 ಸಾವು, ಮುಂದುವರಿದ ರಕ್ಷಣಾ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 4:36 IST
Last Updated 12 ಫೆಬ್ರುವರಿ 2019, 4:36 IST
   

ನವದೆಹಲಿ: ಇಲ್ಲಿನ ಕರೋಲ್ ಭಾಗ್‌ ಪ್ರದೇಶದಲ್ಲಿರುವ ಅರ್ಪಿತ್‌ ಪ್ಯಾಲೆಸ್‌ ಹೋಟೆಲ್‌ಗೆ ಬೆಂಕಿ ತಗುಲಿದ್ದು, 15 ಜನರು ಮೃತಪಟ್ಟಿರುವ ವರದಿಯಾಗಿದೆ.

ಮಂಗಳವಾರ ಮುಂಜಾನೆ 4.30ರ ಸುಮಾರಿಗೆ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಏಳು ಮಂದಿ ಪುರುಷರು, ಓರ್ವ ಮಹಿಳೆ ಹಾಗೂ ಒಂದು ಮಗು ಜೀವ ಕಳೆದುಕೊಂಡಿದ್ದಾರೆ ಎಂದು ಅಗ್ನಿಶಾಮಕ ಇಲಾಖೆ ಮೂಲಗಳು ತಿಳಿಸಿವೆ.

ಬೆಂಕಿ ಕಾಣಿಸಿಕೊಂಡ ಸಂದರ್ಭ ಹೋಟೆಲ್‌ನಲ್ಲಿ 60ಕ್ಕೂ ಹೆಚ್ಚು ಜನರು ಇದ್ದರು ಎನ್ನಲಾಗಿದ್ದು, ಸದ್ಯಐವರನ್ನು ರಕ್ಷಿಸಲಾಗಿದೆ. ಹೆಚ್ಚಿ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.