ADVERTISEMENT

ರಾಜಸ್ಥಾನ ಹೈಕೋರ್ಟ್‌ಗೆ 9 ಹೊಸ ನ್ಯಾಯಾಧೀಶರು

ಪಿಟಿಐ
Published 13 ಜನವರಿ 2023, 13:18 IST
Last Updated 13 ಜನವರಿ 2023, 13:18 IST
ಕೇಂದ್ರ ಕಾನೂನು ಸಚಿವ  ಕಿರಣ್ ರಿಜಿಜು
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು   

ನವದೆಹಲಿ: ರಾಜಸ್ಥಾನ ಹೈಕೋರ್ಟ್‌ಗೆ 9 ನ್ಯಾಯಾಧೀಶರನ್ನು ನೇಮಿಸಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ರಾಜಸ್ಥಾನ ಹೈಕೋರ್ಟ್‌ಗೆ, ವಕೀಲರಾದ ಗಣೇಶ್ ರಾಮ್ ಮೀನಾ, ಅನಿಲ್ ಕುಮಾರ್ ಉಪ್ಮಾನ್ ಮತ್ತು ನೂಪುರ್ ಭಾಟಿ ಹಾಗೂ ನ್ಯಾಯಾಂಗ ಅಧಿಕಾರಿಗಳಾದ ರಾಜೇಂದ್ರ ಪ್ರಕಾಶ್ ಸೋನಿ, ಅಶೋಕ್ ಕುಮಾರ್ ಜೈನ್, ಯೋಗೇಂದ್ರ ಕುಮಾರ್ ಪುರೋಹಿತ್, ಭುವನ್ ಗೋಯಲ್, ಪ್ರವೀರ್ ಭಟ್ನಾಗರ್, ಅಶುತೋಷ್ ಕುಮಾರ್ ಅವರನ್ನು ನೇಮಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.