ADVERTISEMENT

ಪುಶ್‌ಬ್ಯಾಕ್ ವೇಳೆ ವಿದ್ಯುತ್ ಕಂಬಕ್ಕೆ ಬಡಿದ ಸ್ಪೈಸ್ ಜೆಟ್ ವಿಮಾನದ ರೆಕ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮಾರ್ಚ್ 2022, 9:42 IST
Last Updated 28 ಮಾರ್ಚ್ 2022, 9:42 IST
ಸ್ಪೈಸ್ ಜೆಟ್ ಸಂಗ್ರಹ ಚಿತ್ರ: ಪಿಟಿಐ
ಸ್ಪೈಸ್ ಜೆಟ್ ಸಂಗ್ರಹ ಚಿತ್ರ: ಪಿಟಿಐ   

ನವದೆಹಲಿ: ಪುಶ್‌ಬ್ಯಾಕ್ ವೇಳೆ ಪ್ರಯಾಣಿಕರಿದ್ದ ಸ್ಪೈಸ್ ಜೆಟ್ ವಿಮಾನವು ವಿದ್ಯುತ್ ಕಂಬಕ್ಕೆ ಬಡಿದಿರುವ ಘಟನೆ ನವದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಸ್ಪೈಸ್‌ ಜೆಟ್‌ನ ಎಸ್‌ಜಿ–160 ವಿಮಾನವು ದೆಹಲಿಯಿಂದ ಜಮ್ಮುವಿಗೆ ತೆರಳಬೇಕಿತ್ತು. ಪ್ಯಾಸೆಂಜರ್‌ ಟರ್ಮಿನಲ್‌ನಿಂದ ವಿಮಾನವು ರನ್‌ವೇ ಕಡೆಗೆ ತೆರಳುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಬಂಧಿಸಿದೆ. ಅದೃಷ್ಟವಶಾತ್, ಯಾವುದೇ ಪ್ರಯಾಣಿಕರಿಗೆ ತೊಂದರೆ ಆಗಿಲ್ಲ. ಕೂಡಲೇ ಪ್ರಯಾಣಿಕರನ್ನು ಬೇರೊಂದು ಏರ್‌ಕ್ರಾಫ್ಟ್‌ಗೆ ಸ್ಥಳಾಂತರಿಸಲಾಗಿದೆ.

ಘಟನೆ ಕುರಿತಂತೆ ತನಿಖೆಗೆ ಆದೇಶಿಸಿರುವುದಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿರುವುದಾಗಿ ಎಎನ್‌ಐ ಟ್ವೀಟ್ ಮಾಡಿದೆ.

ADVERTISEMENT

ವಿಮಾನದ ಪುಶ್‌ಬ್ಯಾಕ್ ಸಂದರ್ಭ ಬಲಬದಿಯ ರೆಕ್ಕೆ ವಿದ್ಯುತ್ ಕಂಬಕ್ಕೆ ಬಡಿದಿದೆ. ಇದರಿಂದ ವಿಮಾನ ಮತ್ತು ಕಂಬ ಎರಡಕ್ಕೂ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.