ರಮಣಿ, ಮದನ್
ತಂಜಾವೂರು, ತಮಿಳುನಾಡು: ಶಾಲಾ ಆವರಣದಲ್ಲಿ ಯುವಕನೊಬ್ಬ ಶಿಕ್ಷಕಿಯೊಬ್ಬರಿಗೆ ಚೂರಿಯಿಂದ ಇರಿದಿರುವ ಪರಿಣಾಮ ಶಿಕ್ಷಕಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ತಂಜಾವೂರು ಜಿಲ್ಲೆಯ ಮಲ್ಲಿಪಟ್ಟಣಂನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಬುಧವಾರ ನಡೆದಿದೆ.
ಮೃತ ಶಿಕ್ಷಕಿಯನ್ನು ಮಲ್ಲಿಪಟ್ಟಣಂನ ರಮಣಿ (28) ಎಂದು ಗುರುತಿಸಲಾಗಿದೆ.
ಶಾಲಾ ಸಿಬ್ಬಂದಿ ಇದ್ದ ಕೊಠಡಿಗೆ ಏಕಾಏಕಿ ನುಗ್ಗಿದ ಮದನ್ ಎನ್ನುವ ಯುವಕ ಎಲ್ಲರೆದರೂ ಶಿಕ್ಷಕಿ ರಮಣಿಗೆ ಇರಿದಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ರಮಣಿ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಮೃತಪಟ್ಟರು ಎಂದು ತಂಜಾವೂರು ಪೊಲೀಸರು ತಿಳಿಸಿದ್ದಾರೆ.
ತಂಜಾವೂರು ಜಿಲ್ಲೆಯ ಮದನ್ ಎನ್ನುವ ಯುವಕನಿಗೆ ರಮಣಿ ಅವರ ಜೊತೆ ಮನೆಯವರ ಸಮ್ಮುಖದಲ್ಲಿ ಮದುವೆ ನಿಶ್ಚಯವಾಗಿತ್ತು. ಆದರೆ, ಕೆಲ ದಿನಗಳ ಹಿಂದೆ ಮದನ್ ಸಂಬಂಧವನ್ನು ರಮಣಿ ನಿರಾಕರಿಸಿದ್ದರು ಎನ್ನಲಾಗಿದೆ. ಇದರಿಂದ ಮದನ್ ಕುಪಿತಗೊಂಡು ದುಷ್ಕೃತ್ಯ ಎಸಗಿದ್ದು ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ತಮಿಳುನಾಡು ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್, ಶಿಕ್ಷಕರ ಮೇಲಿನ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ. ದಾಳಿ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.