ADVERTISEMENT

ತಮಿಳುನಾಡು: ಮಕ್ಕಳಿಗೆ ಆಧಾರ್ ಮನೆಬಾಗಿಲಿಗೆ

ಪಿಟಿಐ
Published 18 ಡಿಸೆಂಬರ್ 2018, 19:26 IST
Last Updated 18 ಡಿಸೆಂಬರ್ 2018, 19:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಧಾರ್ ಕಾರ್ಡ್ ನೀಡಲು ಮನೆಬಾಗಿಲಲ್ಲೇ ಸೇವೆ ಒದಗಿಸುವ ಯೋಜನೆಯನ್ನು ತಮಿಳುನಾಡು ಸರ್ಕಾರ ಆರಂಭಿಸಿದೆ.

ಬಯೊಮೆಟ್ರಿಕ್‌ ಯಂತ್ರ, ಲ್ಯಾಪ್‌ಟಾಪ್ ಹೊಂದಿರುವ ಕಿಟ್‌ಗಳನ್ನು ಸಮಾಜ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ವಿತರಿಸುವ ಮೂಲಕ, ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು₹13.61 ಕೋಟಿ ವೆಚ್ಚದಈ ಯೋಜನೆಗೆ ಚಾಲನೆ ನೀಡಿದ್ದಾರೆ.

ಯೋಜನೆ ಅಡಿಮನೆಗಳಿಗೆ ಭೇಟಿ ನೀಡುವ ಸಿಬ್ಬಂದಿ, ಮಕ್ಕಳ ಬಯೊಮೆಟ್ರಿಕ್ ಮಾಹಿತಿ ಸಂಗ್ರಹಿಸಿ 12 ಅಂಕಿಗಳ ವಿಶಿಷ್ಟ ಗುರುತಿನ ಚೀಟಿ ನೀಡುತ್ತಾರೆ ಎಂದು ಸರ್ಕಾರಿ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.