ADVERTISEMENT

ಬಿಎಂಸಿ ಚುನಾವಣೆಗೆ ಸಿದ್ಧತೆ ಆರಂಭಿಸಿದ ಆಮ್ ಆದ್ಮಿ ಪಕ್ಷ  

ಮೃತ್ಯುಂಜಯ ಬೋಸ್
Published 24 ಆಗಸ್ಟ್ 2020, 5:46 IST
Last Updated 24 ಆಗಸ್ಟ್ 2020, 5:46 IST
ಬಿಎಂಸಿ
ಬಿಎಂಸಿ   

ಮುಂಬೈ: 2022ರಲ್ಲಿ ನಡೆಯಲಿರುವ ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಗೆ ಆಮ್ ಆದ್ಮಿ ಪಕ್ಷ ಸಿದ್ಧತೆ ಆರಂಭಿಸಿದೆ.

ಇದಕ್ಕಾಗಿ ಕಾರ್ಯಪಡೆ ರಚಿಸಿರುವುದಾಗಿ ಕಳೆದ ವಾರವೇ ಆಮ್ ಆದ್ಮಿ ಪಕ್ಷ ಘೋಷಿಸಿತ್ತು.ಕಾರ್ಯಪಡೆ ಜತೆಗೆ ಮುಂಬೈಯ 6 ಲೋಕಸಭಾ ಸೀಟುಗಳು ಮತ್ತು 36 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಚುನಾವಣಾ ಪ್ರಚಾರ ನಡೆಸಲು ಪಕ್ಷ ತೀರ್ಮಾನಿಸಿದೆ.

ಪ್ರತಿಯೊಬ್ಬ ಮುಂಬೈ ನಿವಾಸಿಯತ್ತ ತಾವು ತಲುಪಬೇಕು ಎಂಬ ಉದ್ದೇಶದಿಂದ ಪಕ್ಷ ಕಾರ್ಯ ನಿರ್ವಹಿಸಲಿದೆ. ಮುಂಬೈ ನಿವಾಸಿಗಳು ಕೆಟ್ಟ ಆಡಳಿತ ಮತ್ತು ಸ್ಥಳೀಯ ಆಡಳಿತಾಧಿಕಾರ ಅಸಡ್ಡೆಯನ್ನು ವರ್ಷಗಳಿಂದ ಸಹಿಸಿಕೊಂಡು ಬಂದಿದ್ದಾರೆ.

ADVERTISEMENT

ಪ್ರಾಮಾಣಿಕ ರಾಜಕಾರಣ ಮತ್ತು ಉತ್ತಮ ಆಡಳಿತಕ್ಕಾಗಿ ನೀವು ಆಮ್ ಆದ್ಮಿ ಪಕ್ಷ ಸೇರುವ ಮೂಲಕ ಜನಾಂದೋಲನವನ್ನು ಸುದೃಢವಾಗಿಸಿ ಎಂದು ನಾವು ಮನವಿ ಮಾಡುತ್ತಿದ್ದೇವೆ. 2022ರಲ್ಲಿ ಮುಂಬೈ ನಿವಾಸಿಗಳು ಉತ್ತಮ ಆಡಳಿತಕ್ಕಾಗಿ ಎಎಪಿ ಅಭ್ಯರ್ಥಿಗಳಿಗೆ ಮತ ಹಾಕಬೇಕು. ಎಎಪಿ ಪರ್ಯಾಯ ಮಾತ್ರವಲ್ಲ ಪರಿಹಾರವೂ ಹೌದು ಎಂದು ಎಎಪಿ ನಾಯಕಿ ಪ್ರೀತಿ ಶರ್ಮಾ ಮೆನನ್ ಹೇಳಿದ್ದಾರೆ.

ಕಾರ್ಯಪಡೆಯಲ್ಲಿ ಆದಿತ್ಯ ಪೌಲ್, ದ್ವಿಜೇಂದ್ರ ತಿವಾರಿ, ಇಮ್ತಾಯಾಜ್ ಮೊಗುಲ, ಕಾಶೀನಾಥ್ ಕೆ, ಮನು ಪಿಳ್ಳೈ, ಮಿಥಾಲಿ ನಾಯಕ್ - ಸತಾಂ, ರಾಧಿಕಾ ನಾಯರ್, ರುಬೇನ್ ಮಸ್ಕರೆನ್ಹಾಸ್, ಸಹಿಲ್ ಪರ್‌ಸೇಕರ್, ಸುಮಿತ್ರಾ ಶ್ರೀವಾಸ್ತವ್ಮತ್ತು ಐಸಿ ರಾವ್ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.