ADVERTISEMENT

ಚೀನಾಕ್ಕೆ ಹವಾಲ ಹಣ ಪಾವತಿ: ಎಎಪಿ ಸಚಿವ‌ರ ವಿರುದ್ಧ ಆರೋಪ

ಪಿಟಿಐ
Published 3 ನವೆಂಬರ್ 2023, 16:28 IST
Last Updated 3 ನವೆಂಬರ್ 2023, 16:28 IST
<div class="paragraphs"><p>h</p></div>

h

   

ನವದೆಹಲಿ: ದೆಹಲಿಯ ಎಎಪಿ ಸಚಿವ ರಾಜ್‌ ಕುಮಾರ್‌ ಆನಂದ್‌ ಅವರು ಚೀನಾಕ್ಕೆ ಹವಾಲ ಹಣ ಪಾವತಿ ಮಾಡಿದ್ದಾರೆ ಎಂದು ರೆವಿನ್ಯೂ ಗುಪ್ತಚರ ನಿರ್ದೇಶನಾಲಯವು (ಡಿಆರ್‌ಐ) ಆರೋಪಿಸಿರುವುದಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ಹೇಳಿದೆ.

ರಾಜ್‌ ಕುಮಾರ್‌ ಅವರು ಚೀನಾದಿಂದ ವಸ್ತುಗಳನ್ನು ಆಮದು ಮಾಡಿಕೊಂಡು, ₹ 7 ಕೋಟಿಯ ಕಸ್ಟಮ್ಸ್ ಸುಂಕವನ್ನು ವಂಚಿಸಿ ಹಣ ಪಾವತಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ADVERTISEMENT

ಡಿಆರ್‌ಐ ಅಧಿಕಾರಿಗಳು ನೀಡಿರುವ ದೂರಿನ ಆಧಾರದಲ್ಲೂ ರಾಜ್‌ಕುಮಾರ್ ವಿರುದ್ಧ ತನಿಖೆ ನಡೆಸುತ್ತಿದ್ದೇವೆ ಎಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ.

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ  ರಾಜ್‌ ಕು‌ಮಾರ್‌ ಅವರಿಗೆ ಸೇರಿದ ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳು ಗುರುವಾರ ಶೋಧ ಕಾರ್ಯ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.