ADVERTISEMENT

11 ಭಾಷೆಗಳಲ್ಲಿ ಪೋಸ್ಟರ್‌ ಅಂಟಿಸಿ ಪ್ರಧಾನಿ ವಿರುದ್ಧ ಪ್ರತಿಭಟನೆ: ಎಎಪಿ ನಿರ್ಧಾರ

ಪಿಟಿಐ
Published 28 ಮಾರ್ಚ್ 2023, 15:36 IST
Last Updated 28 ಮಾರ್ಚ್ 2023, 15:36 IST
ಅರವಿಂದ ಕೇಜ್ರಿವಾಲ್‌
ಅರವಿಂದ ಕೇಜ್ರಿವಾಲ್‌    

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಮಾರ್ಚ್‌ 30ರಂದು ದೇಶದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಆಮ್‌ ಆದ್ಮಿ ಪಕ್ಷ ಮಂಗಳವಾರ ತಿಳಿಸಿದೆ.

‘ಪ್ರತಿಭಟನೆ ಸಂಬಂಧ 11 ಭಾಷೆಗಳಲ್ಲಿ ಪೋಸ್ಟರ್‌ಗಳನ್ನು ಸಿದ್ಧಪಡಿಸಲಾಗಿದೆ’ ಎಂದು ದೆಹಲಿ ರಾಜ್ಯ ಸಂಚಾಲಕ ಹಾಗೂ ಪರಿಸರ ಸಚಿವ ಗೋಪಾಲ್‌ ರೈ ಅವರು ತಿಳಿಸಿದರು.

ದೆಹಲಿಯ ಗೋಡೆ ಗೋಡೆಗಳ ಮೇಲೆ ಹಾಗೂ ಎಲೆಕ್ಟ್ರಿಲ್‌ ಕಂಬಗಳ ಮೇಲೆ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ‘ಮೋದಿಯನ್ನು ಇಳಿಸಿ, ದೇಶವನ್ನು ಉಳಿಸಿ’ ಎಂಬ ಬರಹ ಇದ್ದ ಪೋಸ್ಟರ್‌ಗಳನ್ನು ಕಳೆದ ವಾರ ಅಂಟಿಸಿದ್ದರು. ಈ ಸಂಬಂಧ ಆರು ಮಂದಿಯನ್ನು ಬಂಧಿಸಲಾಗುತ್ತು. ಜೊತೆಗೆ 49 ಎಫ್‌ಐಆರ್‌ಗಳನ್ನು ದಾಖಲು ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.