
ಸಾಂಕೇತಿಕ ಚಿತ್ರ
ನವದೆಹಲಿ: ಕ್ವಿಕ್ ಕಾಮರ್ಸ್ ಕಂಪನಿಗಳ ‘10 ನಿಮಿಷಗಳ ವಿತರಣಾ ಸೇವೆ’ಯನ್ನು ರದ್ದುಗೊಳಿಸುವ ಮೂಲಕ ಗಿಗ್ ಕಾರ್ಮಿಕರ ಜೀವ ರಕ್ಷಿಸಬೇಕು ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್ ಚಡ್ಡಾ ಶುಕ್ರವಾರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತೀವ್ರ ಒತ್ತಡದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಡುವ ಗಿಗ್ ಕಾರ್ಮಿಕರ ಕೆಲಸವನ್ನು ‘ಕ್ರೌರ್ಯ’ ಎಂದು ರಾಘವ್ ಬಣ್ಣಿಸಿದ್ದಾರೆ.
ರಾಜ್ಯಸಭೆಯಲ್ಲಿ ಶೂನ್ಯವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಚಡ್ಡಾ, ‘ಡೆಲಿವರಿ ಸಿಬ್ಬಂದಿ ರೊಬೊಗಳಲ್ಲ. ಅವರು ಯಾರಿಗೋ ತಂದೆಯೋ, ಮಗನೋ, ಸಹೋದರನೋ, ಪತಿಯೋ ಆಗಿರುತ್ತಾರೆ. ಸದನವು ಇವರ ಬಗ್ಗೆಯೂ ಯೋಚಿಸಬೇಕು. ಹತ್ತು ನಿಮಿಷಗಳ ವಿತರಣಾ ಸೇವೆ ಕೊನೆಗೊಳ್ಳಬೇಕು ’ ಎಂದು ಒತ್ತಾಯಿಸಿದರು.
ಗ್ರಾಹಕರು ಹತ್ತು ನಿಮಿಷಗಳಲ್ಲಿ ತಮ್ಮ ಮನೆಗಳಿಗೆ ಆಹಾರ ತಲುಪಬೇಕು ಎಂದು ಬಯಸುವಾಗ, ಸದನವು ಗಿಗ್ ಕಾರ್ಮಿಕರ ಕ್ಷೇಮದ ಬಗ್ಗೆಯೂ ಯೋಚಿಸಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.