ADVERTISEMENT

ಬ್ರಹ್ಮೋಸ್‌ ಕ್ಷಿಪಣಿಯ ಆಕಸ್ಮಿಕ ಉಡಾವಣೆ: ಮೂವರು ಅಧಿಕಾರಿಗಳು ವಜಾ

ಪಿಟಿಐ
Published 23 ಆಗಸ್ಟ್ 2022, 15:49 IST
Last Updated 23 ಆಗಸ್ಟ್ 2022, 15:49 IST

ನವದೆಹಲಿ (ಪಿಟಿಐ): ಮಾರ್ಚ್‌ 9ರಂದುಬ್ರಹ್ಮೋಸ್‌ ಕ್ಷಿಪಣಿಯು ಆಕಸ್ಮಿಕವಾಗಿ ಪಾಕಿಸ್ತಾನದ ನೆಲದಲ್ಲಿ ಹೋಗಿ ಬಿದ್ದ ಪ್ರಕರಣ ಸಂಬಂಧ ರಕ್ಷಣಾ ಸಚಿವಾಲಯವು ಮೂವರು ಅಧಿಕಾರಿಗಳನ್ನು ಮಂಗಳವಾರ ವಜಾ ಮಾಡಲಾಗಿದೆ.

‘ಘಟನೆಯ ಕುರಿತು ತನಿಖಾ ಸಮಿತಿಯೊಂದನ್ನು ರಚಿಸಲಾಗಿತ್ತು. ಘಟನೆಗೆ ಯಾರು ಹೊಣೆ ಎಂಬುದರ ಕುರಿತೂ ತನಿಖೆ ನಡೆಸಲು ಹೇಳಲಾಗಿತ್ತು. ಈ ಮೂವರು ಅಧಿಕಾರಿಗಳು ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ಸರಿಯಾಗಿ ಅನುಸರಿಸದಿರುವುದರಿಂದ ಬ್ರಹ್ಮೋಸ್‌ ಕ್ಷಿಪಣಿಯು ಆಕಸ್ಮಿಕವಾಗಿ ಪಾಕಿಸ್ತಾನದ ನೆಲದಲ್ಲಿ ಹೋಗಿ ಬಿದ್ದಿದೆ ಎಂದು ಸಮಿತಿ ವರದಿ ನೀಡಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ತಕ್ಷಣದಲ್ಲಿ ಜಾರಿಯಾಗುವಂತೆ ಅಧಿಕಾರಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.