ADVERTISEMENT

ಸಂಶಯದ ಮೇಲೆ ಆರೋಪಿಗೆ ಶಿಕ್ಷೆ ಸಲ್ಲದು: ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 15:34 IST
Last Updated 11 ಆಗಸ್ಟ್ 2022, 15:34 IST
   

ನವದೆಹಲಿ: ಬಲವಾದ ಸಾಕ್ಷ್ಯಗಳಿಲ್ಲದೇ ಸಂಶಯದ ಆಧಾರದ ಮೇಲೆ ಆರೋಪಿಯನ್ನು ದೋಷಿಯಾಗಿ ತೀರ್ಮಾನಿಸಿ ಶಿಕ್ಷೆ ವಿಧಿಸಲಾಗದು ಎಂದು ಸುಪ್ರೀಂಕೋರ್ಟ್‌ ಗುರುವಾರ ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ ಮತ್ತು ಪಿ.ಎಸ್‌. ನರಸಿಂಹ ಅವರಿದ್ದ ಪೀಠವು‌,ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ಜೀವಾವಧಿ ಶಿಕ್ಷೆಯ ತೀರ್ಪು ಪ್ರಶ್ನಿಸಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ಕೊಲೆ ಪ್ರಕರಣದ ಆಪಾದನೆಯಿಂದ ಆತನನ್ನು ಖುಲಾಸೆಗೊಳಿಸಿತು.

‘ಆರೋಪಿ ವಿರುದ್ಧದ ಆಪಾದನೆ ನ್ಯಾಯಸಮ್ಮತವಾಗಿ ಸಾಬೀತಾಗದಿದ್ದರೆ ಆತ ನಿರಪರಾಧಿಯೆಂದೇ ಭಾವಿಸಬೇಕು’ ಎಂದು ಪೀಠಹೇಳಿದೆ.

ADVERTISEMENT

ವ್ಯಕ್ತಿಯ ಪರವಾಗಿ ವಕೀಲ ರಿಶಿ ಮಲ್ಹೋತ್ರಾ ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.