ಸುಪ್ರೀಂ ಕೋರ್ಟ್
ನವದೆಹಲಿ: ಆ್ಯಸಿಡ್ ದಾಳಿಗೆ ತುತ್ತಾದ ಸಂತ್ರಸ್ತರು ಪರಿಹಾರ ಪಡೆಯುವಲ್ಲಿ ವಿಳಂಬವಾದರೆ ಆಯಾ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬಹುದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರಿದ್ದ ಪೀಠವು ಮುಂಬೈ ಮೂಲದ ಎನ್‌ಜಿಒ ಆಸಿಡ್ ಸರ್ವೈವರ್ಸ್ ಸಾಹಸ್ ಫೌಂಡೇಷನ್ ಪರ ವಕೀಲರ ಮನವಿಯನ್ನು ಆಲಿಸಿತು.
ಆಸಿಡ್ ದಾಳಿಯ ಸಂತ್ರಸ್ತರು ಮಹಾರಾಷ್ಟ್ರದ ಅಧಿಕಾರಿಗಳಿಂದ ಪರಿಹಾರವನ್ನು ಪಡೆಯುವುದು ಕಷ್ಟಕರವಾಗಿದೆ ಎಂದು ವಕೀಲರು ಪೀಠದ ಗಮನಕ್ಕೆ ತಂದಾಗ, ‘ಇದರಲ್ಲಿ ವಿಳಂಬವಾಗುತ್ತಿದ್ದರೆ, ಆಸಿಡ್ ದಾಳಿಯ ಸಂತ್ರಸ್ತರು ರಾಜ್ಯ ಕಾನೂನು ಸೇವೆಗಳ ಅಧಿಕಾರಿಗಳನ್ನು (ಎಸ್ಎಲ್ಎಸ್ಎ) ಸಂಪರ್ಕಿಸಲು ಮುಕ್ತರು’ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.
ಎನ್‌ಜಿಒದ ಅರ್ಜಿಗೆ ಕೇಂದ್ರ ಮತ್ತು 11 ರಾಜ್ಯಗಳು ಉತ್ತರಗಳನ್ನು ಸಲ್ಲಿಸದೇ ಇರುವುದನ್ನು ಗಮನಿಸಿದ ಪೀಠವು, ಉತ್ತರ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿ, ವಿಚಾರಣೆಯನ್ನು ಮೇ ತಿಂಗಳ ಕೊನೆಯ ವಾರಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.