ADVERTISEMENT

ಬಿ.ಆರ್.ಚೋಪ್ರಾ ಮಹಾಭಾರತದ ಶಕುನಿ ಪಾತ್ರಧಾರಿ ಗೂಫಿ ಫೈಂಥಲ್ ನಿಧನ

ಪಿಟಿಐ
Published 5 ಜೂನ್ 2023, 8:18 IST
Last Updated 5 ಜೂನ್ 2023, 8:18 IST
   

ಮುಂಬೈ: ಹಿಂದಿನ ಚಲನಚಿತ್ರ ಹಾಗೂ ಕಿರುತೆರೆ ನಟ ಗೂಫಿ ಪೈಂಥಲ್‌ (79) ಸೋಮವಾರ ನಿಧನರಾದರು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಎಂಟು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಪುತ್ರ ಇದ್ದಾರೆ.

ಎಂಜಿನಿಯರ್ ಆಗಿದ್ದ ಗೂಫಿ ಅವರು ಭಾರತೀಯ ಫಿಲ್ಮ್ ಹಾಗೂ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ನಲ್ಲಿ ನಟನಾ ತರಬೇತಿ ಪಡೆದಿದ್ದರು. ದೂರದರ್ಶನದಲ್ಲಿ  ಬಿ.ಆರ್.ಚೋಪ್ರಾ ನಿರ್ಮಾಣದ ಮಹಾಭಾರತ ಶಕುನಿ ಪಾತ್ರದಲ್ಲಿ ನಟಿಸಿದ್ದ ಅವರ ನಟನೆ ಭಾರೀ ಜನಪ್ರಿಯತೆ ಪಡೆದಿತ್ತು. 

ADVERTISEMENT

ನಂತರ ಸುಹಾಗ್, ದಿಲ್ಲಗಿ, ದೇಸ್ ಪರದೇಸ್, ರಫೂ ಚಕ್ಕರ್‌ ಚಿತ್ರಗಳಲ್ಲಿ ಗೂಫಿ ಅವಕಾಶ ಪಡೆದರು. ಕಿರುತೆರೆಯಲ್ಲಿ ಸಿಐಡಿ, ಹೆಲೊ ಇನ್‌ಸ್ಪೆಕ್ಟರ್‌ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹೀಗಿದ್ದರೂ ಶಕುನಿ ಪಾತ್ರದ ಮೂಲಕವೇ ಅವರ ಹೆಸರು ಇಂದಿಗೂ ಮನೆಮಾತಾಗಿದೆ.

2010ರಲ್ಲಿ ಮುಂಬೈನ ಅಭಿಯನ ಆಕ್ಟಿಂಗ್ ಅಕಾಡೆಮಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಶ್ರೀ ಚೈತನ್ಯ ಮಹಾಪ್ರಭು ಎಂಬ ಚಿತ್ರಕ್ಕೆ ಅವರು ನಿರ್ದೇಶನವನ್ನೂ ಮಾಡಿದ್ದಾರೆ.

ಗೂಫಿ ಪೈಂಥಲ್‌ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಸೋಮವಾರ ಸಂಜೆ 4ಕ್ಕೆ ಅಂಧೇರಿ ಉಪನಗರದ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.