ADVERTISEMENT

ನಟ ವಿಕ್ರಂ ಗೋಖಲೆ ನಿಧನರಾಗಿಲ್ಲ, ಉಸಿರಾಡುತ್ತಿದ್ದಾರೆ: ಪತ್ನಿ, ಮಗಳು ಸ್ಪಷ್ಟನೆ

ಪಿಟಿಐ
Published 24 ನವೆಂಬರ್ 2022, 7:15 IST
Last Updated 24 ನವೆಂಬರ್ 2022, 7:15 IST
ವಿಕ್ರಂ ಗೋಖಲೆ
ವಿಕ್ರಂ ಗೋಖಲೆ   

ಪುಣೆ: ಕಿರುತೆರೆ ಹಾಗೂ ಚಲನಚಿತ್ರ ನಟ ವಿಕ್ರಂ ಗೋಖಲೆ (82) ಅವರು ಬುಧವಾರ ತಡರಾತ್ರಿ ನಿಧನರಾಗಿದ್ದಾರೆ ಎಂಬ ವದಂತಿಯನ್ನು ಅವರ ಮಗಳು ಹಾಗೂ ಪತ್ನಿ ತಳ್ಳಿಹಾಕಿದ್ದಾರೆ. ವಿಕ್ರಂ ಅವರಿಗೆ ಇನ್ನೂ ಚಿಕಿತ್ಸೆ ಮುಂದುವರೆದಿದೆ. ಅವರು ಉಸಿರಾಡುತ್ತಿದ್ದಾರೆ ಎಂದು ವಿಕ್ರಂ ಪತ್ನಿ ವೃಶಾಲಿ ಹಾಗೂ ಮಗಳು ತಿಳಿಸಿದ್ದಾರೆ.

ವಿಕ್ರಂ ಗೋಖಲೆ ಅವರು ನಿಧನರಾಗಿಲ್ಲ. ಯಾರೂ ವದಂತಿ ಹಬ್ಬಿಸಬಾರದು ಎಂದು ಮಗಳು ಮನವಿ ಮಾಡಿದ್ದಾರೆ. ವಿಕ್ರಂ ಅವರು ನಿಧನರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಈ ಕುರಿತು ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ಬುಧವಾರ ಸಂಜೆ ಇಲ್ಲಿನ ದೀನಾನಾಥ್‌ ಮಂಗೇಶ್ಕರ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ADVERTISEMENT

ವಿಕ್ರಂ ಅವರು ಬಾಲಿವುಡ್‌ ಹಾಗೂ ಮರಾಠಿಯ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. 1990ರಲ್ಲಿ ತೆರೆಕಂಡಿದ್ದ ಅಮಿತಾಬ್‌ ಬಚ್ಚನ್‌ ಮುಖ್ಯ ಭೂಮಿಕೆಯ ‘ಅಗ್ನಿಪಥ್’, ಸಲ್ಮಾನ್‌ ಖಾನ್‌ ಹಾಗೂ ಐಶ್ವರ್ಯ ರೈ ಬಚ್ಚನ್‌ ಅಭಿನಯದ ‘ಹಮ್‌ ದಿಲ್‌ ದೇ ಚುಕೆ ಸನಮ್‌’ ಅವರು ನಟಿಸಿದ್ದ ಪ್ರಮುಖ ಚಿತ್ರಗಳಾಗಿವೆ. ಅವರು ಅಭಿನಯಿಸಿದ್ದ ಮರಾಠಿಯ ‘ಗೋದಾವರಿ’ ಚಿತ್ರ ಇತ್ತೀಚೆಗೆ ತೆರೆಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.