ADVERTISEMENT

‘ಅದಾನಿ ಸಮೂಹದಿಂದ ಕಾರೈಕಲ್ ಬಂದರು ಸ್ವಾಧೀನ ಪೂರ್ಣ’

ಪಿಟಿಐ
Published 2 ಏಪ್ರಿಲ್ 2023, 7:15 IST
Last Updated 2 ಏಪ್ರಿಲ್ 2023, 7:15 IST
FILE PHOTO: The logo of the Adani group is seen on the facade of one of its buildings on the outskirts of Ahmedabad, India, April 13, 2021. REUTERS/Amit Dave/File Photo
FILE PHOTO: The logo of the Adani group is seen on the facade of one of its buildings on the outskirts of Ahmedabad, India, April 13, 2021. REUTERS/Amit Dave/File Photo   

ನವದೆಹಲಿ: ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ಪುದುಚೇರಿಯ ಕಾರೈಕಲ್ ಬಂದರು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯ ನಿಯಮಿತ (ಎಪಿಎಸ್‌ಇಝಡ್) ಶನಿವಾರ ತಿಳಿಸಿದೆ.

ಒಟ್ಟು ₹1,485 ಕೋಟಿ ಮೊತ್ತಕ್ಕೆ ಈ ಬಂದರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಂದರು ಒಟ್ಟು ಐದು ದಕ್ಕೆಗಳನ್ನು ಒಳಗೊಂಡಿದ್ದು, ಮೂರು ರೈಲು ಮಾರ್ಗಗಳ ಸಂಪರ್ಕ ಹೊಂದಿದೆ. ವಾರ್ಷಿಕ 21.5 ಕೋಟಿ ಟನ್‌ ಸರಕು ನಿರ್ವಹಣಾ ಸಾಮರ್ಥ್ಯ ಹೊಂದಿದೆ ಎಂದು ಎಪಿಎಸ್‌ಇಝಡ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT