ADVERTISEMENT

ಮತಕ್ಕಾಗಿ ರಾಜ ಮಿಹಿರ್‌ ಭೋಜ್‌ ಜಾತಿ ಬದಲಿಸಿದ ಯೋಗಿ: ಅಖಿಲೇಶ್ ಟೀಕೆ

ಪಿಟಿಐ
Published 26 ಸೆಪ್ಟೆಂಬರ್ 2021, 16:19 IST
Last Updated 26 ಸೆಪ್ಟೆಂಬರ್ 2021, 16:19 IST
   

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮತಕ್ಕಾಗಿ 9ನೇ ಶತಮಾನದ ರಾಜ ಮಿಹಿರ್‌ ಭೋಜ್‌ರ ಜಾತಿಯನ್ನೇ ‘ಬದಲಿಸಿದರು’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್‌ ಟೀಕಿಸಿದ್ದಾರೆ.

ಯೋಗಿ ಆದಿತ್ಯನಾಥ ಅವರು ದಾದ್ರಿಯ ಗೌತಮಬುದ್ಧ ನಗರದಲ್ಲಿಮಿಹಿರ್ ಭೋಜ್‌ ಅವರ 15 ಅಡಿ ಎತ್ತರದ ಪ್ರತಿಮೆ ಅನಾವರಣಗೊಳಿಸಿದ ಹಿಂದೆಯೇ ಈ ಟೀಕೆ ವ್ಯಕ್ತವಾಗಿದೆ. ಗುರ್ಜಾರ್‌ ಮತ್ತು ರಜಪೂತ್ ಸಮುದಾಯದವರು ಮಿಹಿರ್‌ ಭೋಜ್‌ ತಮ್ಮ ಸಮುದಾಯಕ್ಕೆ ಸೇರಬೇಕಾದವರು ಎಂದು ಪ್ರತಿಪಾದಿಸುತ್ತಿವೆ.

ಚರಿತ್ರೆಯಲ್ಲಿ ಮಿಹಿರ್‌ ಭೋಜ್‌ ಅವರು ಗುರ್ಜಾರ್‌ ಪ್ರತಿಹಾರ್ ಎಂದು ತಿಳಿಸಲಾಗಿದೆ. ಆದರೆ, ಬಿಜೆಪಿಯವರು ಆವರ ಜಾತಿಯನ್ನೇ ಬದಲಿಸಿದ್ದಾರೆ, ಇದು ಖಂಡನೀಯ ಎಂದು ಅಖಿಲೇಶ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.