ADVERTISEMENT

ಮಂಗಳೂರಿನ ಅಡ್ಲಿನ್ ‘ಮಿಸ್‌ ದಿವಾ ಯುನಿವರ್ಸ್‌’

ಪಿಟಿಐ
Published 23 ಫೆಬ್ರುವರಿ 2020, 19:40 IST
Last Updated 23 ಫೆಬ್ರುವರಿ 2020, 19:40 IST
‘ಲಿವಾ ಮಿಸ್‌ ದಿವಾ ಯುನಿವರ್ಸ್‌’ ಆಗಿ ಆಯ್ಕೆಯಾದ ಅಡ್ಲಿನ್ ಕ್ಯಾಸ್ಟೆಲಿನೋ(ಮಧ್ಯದಲ್ಲಿ) ಅವರು ‘ಮಿಸ್‌ ದಿವಾ ಸುಪ್ರಾನೇಷನಲ್‌’ ಆವೃತಿ ಚೌಧರಿ (ಎಡ) ಮತ್ತು ರನ್ನರ್‌ ಅಪ್‌ ನೇಹಾ ಜೈಸ್ವಾಲ್‌ ಅವರೊಂದಿಗೆ –ಪಿಟಿಐ ಚಿತ್ರ
‘ಲಿವಾ ಮಿಸ್‌ ದಿವಾ ಯುನಿವರ್ಸ್‌’ ಆಗಿ ಆಯ್ಕೆಯಾದ ಅಡ್ಲಿನ್ ಕ್ಯಾಸ್ಟೆಲಿನೋ(ಮಧ್ಯದಲ್ಲಿ) ಅವರು ‘ಮಿಸ್‌ ದಿವಾ ಸುಪ್ರಾನೇಷನಲ್‌’ ಆವೃತಿ ಚೌಧರಿ (ಎಡ) ಮತ್ತು ರನ್ನರ್‌ ಅಪ್‌ ನೇಹಾ ಜೈಸ್ವಾಲ್‌ ಅವರೊಂದಿಗೆ –ಪಿಟಿಐ ಚಿತ್ರ   

ಮುಂಬೈ: ಲಿವಾ ಮಿಸ್‌ ದಿವಾ ಯುನಿವರ್ಸ್‌ 2020 ಸ್ಪರ್ಧೆಯಲ್ಲಿ ಮಂಗಳೂರಿನ ಅಡ್ಲಿನ್ ಕ್ಯಾಸ್ಟೆಲಿನೋ ವಿಜೇತರಾಗಿದ್ದಾರೆ.

ಯಶ್‌ರಾಜ್‌ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದಿನ ಆವೃತ್ತಿಯ ವಿಜೇತೆ ವರ್ತಿಕಾ ಸಿಂಗ್‌ ಅವರು ಅಡ್ಲಿನ್‌ ಅವರಿಗೆ ಕಿರೀಟ ತೊಡಿಸಿದರು. ಪುಣೆಯ ನೇಹಾ ಜೈಸ್ವಾಲ್‌ ಅವರು ಮಿಸ್‌ ದಿವಾ ರನ್ನರ್‌ ಅಪ್‌ ಆಗಿ ಆಯ್ಕೆಯಾಗಿದ್ದಾರೆ. ಆವೃತಿ ಚೌಧರಿ ಅವರು ಮಿಸ್‌ ದಿವಾ ಸುಪ್ರಾನೇಷನಲ್‌ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ವರ್ಷಾಂತ್ಯಕ್ಕೆ ನಡೆಯಲಿರುವ ಮಿಸ್‌ ಯುನಿವರ್ಸ್‌ ಸ್ಪರ್ಧೆಯಲ್ಲಿ ಅಡ್ಲಿನ್‌ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ADVERTISEMENT

ಮಾಜಿ ಮಿಸ್‌ ಯುನಿವರ್ಸ್‌ ಲಾರಾ ದತ್ತಾ, ಬಾಲಿವುಡ್‌ ನಟ ಅನಿಲ್‌ ಕಪೂರ್‌, ನಟಿ ಯಾಮಿ ಗೌತಮಿ ಮತ್ತಿತರರು ತೀರ್ಪುಗಾರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.