ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ವೈಮಾನಿಕ ಕಣ್ಗಾವಲನ್ನು ಮತ್ತಷ್ಟು ಹೆಚ್ಚಿಸಲು ಅಲ್ಲಿನ ಪೊಲೀಸರಿಗೆ 100 ಡ್ರೋನ್‌ಗಳನ್ನು ನೀಡಲಾಗುವುದು.
ಕೇಂದ್ರ ಗೃಹ ಸಚಿವಾಲಯವು(ಎಂಎಚ್‌ಎ) ಪೊಲೀಸ್ ಇಲಾಖೆಯ ಆಧುನೀಕರಣ ಯೋಜನೆಯಡಿ(ಪಿಎಂಪಿ) ಜಮ್ಮು ಮತ್ತು ಕಾಶ್ಮೀರದ ಪೊಲೀಸರಿಗೆ 100 ಡ್ರೋನ್‌ಗಳನ್ನು ನೀಡಲು ಅನುಮೋದನೆ ನೀಡಿದೆ.
ಇತ್ತೀಚಿನ ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಇಲಾಖೆಯು ಸ್ವಂತ ವೆಚ್ಚದಲ್ಲಿ ಕೆಲವು ಡ್ರೋನ್‌ಗಳನ್ನು ಖರೀದಿಸಿತ್ತು. ಈಗ ದೊರೆಯುವ ಹೊಸ ಡ್ರೋನ್‌ಗಳ ಸಹಾಯದಿಂದ ಪೊಲೀಸರು ಕೇವಲ ಉಗ್ರ ಸಂಬಂಧಿತ ಚಟುವಿಕೆ ಮಾತ್ರವಲ್ಲದೇ ದೇಶ ವಿರೋಧಿ ಪ್ರತಿಭಟನೆಗಳ ಮೇಲೂ ನಿಗಾವಹಿಸಬಹುದಾಗಿದೆ. ಈ ಡ್ರೋನ್‌ಗಳು ಜಮ್ಮು–ಕಾಶ್ಮೀರದ ಪೊಲೀಸರು ಒಳಗೊಂಡಿರುವ ಆಧುನಿಕ ತಂತ್ರಜ್ಞಾನವಾಗಿದೆ.
ಡ್ರೋನ್‌ಗಳು ಉಗ್ರರ ಚಟುವಟಿಕೆ ಮೇಲೆ ನಿಗಾವಹಿಸಲು ಮತ್ತು ವೈಮಾನಿಕ ಕಣ್ಗಾವಲಿಗೆ ಸಹಕಾರಿಯಾಗಲಿದೆ. ಸದ್ಯ ದಕ್ಷಿಣ ಕಾಶ್ಮೀರ ಮತ್ತು ಶ್ರೀನಗರದಂತಹ ಸೂಕ್ಷ್ಮ ಜಿಲ್ಲೆಗಳಲ್ಲಿ ಮಾತ್ರ ಡ್ರೋನ್‌ಗಳಿವೆ. ಹಾಗಾಗಿ ಪ್ರತಿ ಪೊಲೀಸ್ ಠಾಣೆಗೂ ತಲಾ ಎರಡು ಡ್ರೋನ್‌ಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.