ADVERTISEMENT

ಎಇಎಸ್‌: ಸಾವಿನ ಸಂಖ್ಯೆ 118ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 20:41 IST
Last Updated 20 ಜೂನ್ 2019, 20:41 IST
ಮುಜಪ್ಫರ್‌ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಮಗುವೊಂದನ್ನು ದಾಖಲಿಸಿರುವುದು –ಪಿಟಿಐ ಚಿತ್ರ
ಮುಜಪ್ಫರ್‌ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಮಗುವೊಂದನ್ನು ದಾಖಲಿಸಿರುವುದು –ಪಿಟಿಐ ಚಿತ್ರ   

ಮುಜಪ್ಫರ್‌ಪುರ,ಬಿಹಾರ: ಶಂಕಿತ ಮಿದುಳಿನ ತೀವ್ರ ಉರಿಯೂತ ಕಾಯಿಲೆ(ಎಇಎಸ್‌) ಬಾಧಿಸಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಮಕ್ಕಳು ಮೃತಪಟ್ಟಿದ್ದು, ಈ ರೋಗಕ್ಕೆ ಬಲಿಯಾಗಿರುವ ಮಕ್ಕಳ ಸಂಖ್ಯೆ 118 ಕ್ಕೇರಿದೆ ಎಂದು ಜಿಲ್ಲಾಡಳಿತ ಗುರುವಾರ ಹೇಳಿದೆ.

ಸರ್ಕಾರಿ ಸ್ವಾಮ್ಯದ ಶ್ರೀಕೃಷ್ಣ ಆಸ್ಪತ್ರೆಯಲ್ಲಿ ಇಬ್ಬರು ಮಕ್ಕಳು ಹಾಗೂ ಕೇಜ್ರಿವಾಲ್‌ ಖಾಸಗಿ ಆಸ್ಪತ್ರೆಯಲ್ಲಿ ಇನ್ನೊಂದು ಮಗು ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ಪೂರ್ವ ಚಂಪಾರಣ್‌ ಜಿಲ್ಲೆಯಲ್ಲೂ ಮಗುವೊಂದು ಈ ರೋಗದಿಂದ ಮೃತಪಟ್ಟಿತ್ತು.

ಜೂನ್ 1ರಿಂದ ಇದುವರೆಗೆ ಎಇಎಸ್‌ ಬಾಧಿಸಿದ್ದ 398 ಮಕ್ಕಳನ್ನು ಶ್ರೀಕೃಷ್ಣ ಆಸ್ಪತ್ರೆಗೆ ಹಾಗೂ 154 ಮಕ್ಕಳನ್ನು ಕೇಜ್ರಿವಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.