ADVERTISEMENT

ಅಫ್ಗಾನ್–ಪಾಕ್‌ ಸಂ‌‌ಘರ್ಷ: ಇಬ್ಬರ ಸಾವು

ಏಜೆನ್ಸೀಸ್
Published 1 ಮಾರ್ಚ್ 2026, 13:59 IST
Last Updated 1 ಮಾರ್ಚ್ 2026, 13:59 IST
ಸೇನಾ ವಾಹನದೊಂದಿಗೆ ದಾಳಿಗೆ ಸಿದ್ಧರಾಗಿದ್ದ ಅಫ್ಗಾನ್‌ನ ಭದ್ರತಾ ಸಿಬ್ಬಂದಿ
ಸೇನಾ ವಾಹನದೊಂದಿಗೆ ದಾಳಿಗೆ ಸಿದ್ಧರಾಗಿದ್ದ ಅಫ್ಗಾನ್‌ನ ಭದ್ರತಾ ಸಿಬ್ಬಂದಿ   

ಕಾಬೂಲ್: ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನ ಪಡೆಗಳ ನಡುವೆ ಗಡಿಭಾಗದಲ್ಲಿ ನಡೆಯುತ್ತಿರುವ ಸಂಘರ್ಷ ತೀವ್ರಗೊಂಡಿದೆ.

ತಿಂಗಳುಗಳಿಂದ ಗಡಿಯಲ್ಲಿ ಸಂಘರ್ಷ ನಡೆಯುತ್ತಿತ್ತು. ಆದರೆ ಅಫ್ಗಾನಿಸ್ತಾನ ಗುರುವಾರದಿಂದ ಗಡಿಯುದ್ದಕ್ಕೂ ದಾಳಿಯನ್ನು ತೀವ್ರಗೊಳಿಸಿದ್ದರಿಂದ ಪರಿಸ್ಥಿತಿಯು ಉದ್ವಿಗ್ನಗೊಂಡಿತ್ತು. ಪಾಕಿಸ್ತಾನವು  ವಾಯುದಾಳಿ ಮೂಲಕ ಪ್ರತ್ಯುತ್ತರ ನೀಡುತ್ತಿದೆ.

ರಾತ್ರಿಯಿಡಿ ದಾಳಿ–ಪ್ರತಿದಾಳಿ ನಡೆದಿದ್ದು, ಡ್ರೋನ್ ದಾಳಿಯಲ್ಲಿ ಇಬ್ಬರು ನಾಗರಿಕರು ಮತಪಟ್ಟಿದ್ದಾರೆ ಎಂದು ಅಫ್ಗಾನಿಸ್ತಾನ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ರಾಜಧಾನಿ ಕಾಬೂಲ್‌ನ ಉತ್ತರದಲ್ಲಿ ನಡೆದ ವಾಯುದಾಳಿಯು ಬಾಗ್ರಮ್‌ ವಾಯುನೆಲೆಯನ್ನು ನಾಶಮಾಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.