ADVERTISEMENT

70 ದಾಟಿದ ಬಳಿಕ ಪ್ರತಿ ವರ್ಷವೂ ವಿಜಯೋತ್ಸವ: ರಸ್ಕಿನ್‌ ಬಾಂಡ್‌ 

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2025, 14:36 IST
Last Updated 19 ಏಪ್ರಿಲ್ 2025, 14:36 IST
ರಸ್ಕಿನ್‌ ಬಾಂಡ್‌
ರಸ್ಕಿನ್‌ ಬಾಂಡ್‌   

ನವದೆಹಲಿ: ‘ವಯಸ್ಸು 70 ದಾಟಿದ ಬಳಿಕ ಕಳೆಯುತ್ತಿರುವ ಪ್ರತಿವರ್ಷವೂ ವಿಜಯೋತ್ಸವದಂತೆ ಭಾಸವಾಗುತ್ತಿದೆ’ ಎಂದು ಭಾರತದ ಖ್ಯಾತ ಸಾಹಿತಿ ರಸ್ಕಿನ್‌ ಬಾಂಡ್‌ ಹೇಳಿದ್ದಾರೆ.

ಮೇ 19ರಂದು 91ನೇ ವಸಂತಕ್ಕೆ ಕಾಲಿಡಲಿರುವ ಬಾಂಡ್‌, ‘ಅನದರ್‌ ಡೇ ಇನ್ ಲ್ಯಾಂಡೊರ್‌: ಲುಕಿಂಗ್‌ ಔಟ್‌ ಫ್ರಮ್‌ ಮೈ ವಿಂಡೋ’ ಎಂಬ ತಮ್ಮ ನೂತನ ಪುಸ್ತಕದಲ್ಲಿ ಈ ಸಾಲುಗಳನ್ನು ಬರೆದುಕೊಂಡಿದ್ದಾರೆ. ಶನಿವಾರ ಈ ಪುಸ್ತಕ ಬಿಡುಗಡೆಗೊಂಡಿದೆ. 

ಹಲವು ದಶಕಗಳಿಂದ ವಿವಿಧ ಪೀಳಿಗೆಯ ಮನಸ್ಸುಗಳಿಗೆ ಸಾಹಿತ್ಯದ ತಂಪೆರೆದಿರುವ ಬಾಂಡ್‌, 500ಕ್ಕೂ ಅಧಿಕ ಸಣ್ಣ ಕಥೆಗಳು, ಕಾದಂಬರಿ, ಪ್ರಬಂಧಗಳನ್ನು ಬರೆದಿದ್ದಾರೆ. 1956ರಲ್ಲಿ ಬಿಡುಗಡೆಯಾದ ‘ದಿ ರೂಮ್‌ ಆನ್ ದಿ ರೂಫ್‌’ ಅವರ ಮೊದಲ ಕಾದಂಬರಿ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.