ADVERTISEMENT

ಕೇರಳದಲ್ಲೂ 9 ತಿಂಗಳ ನಂತರ ಶಾಲೆಗಳು ಭಾಗಶಃ ಪುನರಾರಂಭ

ಪಿಟಿಐ
Published 1 ಜನವರಿ 2021, 10:25 IST
Last Updated 1 ಜನವರಿ 2021, 10:25 IST
..
..   

ತಿರುವನಂತಪುರ: ಕೇರಳದಲ್ಲೂ ಒಂಬತ್ತು ತಿಂಗಳ ಬಳಿಕ ಶಾಲೆಗಳು ಭಾಗಶಃ ಪುನರಾರಂಭವಾಗಿವೆ.

ಶುಕ್ರವಾರ ವಿದ್ಯಾರ್ಥಿಗಳು ಉತ್ಸಾಹದಿಂದ ಶಾಲೆಗೆ ತೆರಳುತ್ತಿರುವುದು ಕಂಡು ಬಂತು. ಸ್ನೇಹಿತರು ಮತ್ತು ಶಿಕ್ಷಕರನ್ನು ನೋಡಿ ಸಂತಸಪಟ್ಟರು.

ವಿದ್ಯಾರ್ಥಿಗಳ ಸುರಕ್ಷತೆಗಾಗಿ ಕಠಿಣ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ. ಮಾಸ್ಕ್‌ ಧರಿಸುವುದು, ಪದೇ ಪದೇ ಕೈತೊಳೆಯುವುದು ಮತ್ತು ಅಂತರ ಕಾಪಾಡುವಂತೆ ಸೂಚಿಸಲಾಗಿದೆ.

ADVERTISEMENT

10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ–ಕಾಲೇಜು ಆರಂಭಿಸಲಾಗಿದೆ. ಆದರೆ, ತರಗತಿಯ ಅವಧಿಯನ್ನು ಕಡಿಮೆ ಮಾಡಲಾಗಿದೆ. ಪೋಷಕರ ಅನುಮತಿ ಪತ್ರವನ್ನು ಸಹ ಕಡ್ಡಾಯಗೊಳಿಸಲಾಗಿದೆ.

ಇದುವರೆಗೆ ಕೇರಳದ ಶಿಕ್ಷಣಕ್ಕಾಗಿ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಸಂಸ್ಥೆ ಮೂಲಕ ಆನ್‌ಲೈನ್‌ ಶಿಕ್ಷಣ ಒದಗಿಸಲಾಗುತ್ತಿತ್ತು.

ಈಗಿನ ಯೋಜನೆ ಅನ್ವಯ, 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಮಾರ್ಚ್‌ 17ರಿಂದ 30ರವರೆಗೆ ನಡೆಸಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.