ADVERTISEMENT

ಕೇಂದ್ರ ಸಚಿವ ನಾರಾಯಣ ರಾಣೆ ಪುತ್ರನಿಂದ ಪ್ರತೀಕಾರದ ಸುಳಿವು

ಪಿಟಿಐ
Published 25 ಆಗಸ್ಟ್ 2021, 9:01 IST
Last Updated 25 ಆಗಸ್ಟ್ 2021, 9:01 IST
ನಾರಾಯಣ ರಾಣೆ
ನಾರಾಯಣ ರಾಣೆ   

ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ವಿರುದ್ಧ ನೀಡಿದ ಹೇಳಿಕೆಯಿಂದ ಬಂಧನಕ್ಕೊಳಗಾಗಿ, ಬಳಿಕ ಜಾಮೀನು ಪಡೆದಿರುವ ಕೇಂದ್ರ ಸಚಿವ ನಾರಾಯಣ ರಾಣೆ ಅವರ ಪುತ್ರ, ಬಿಜೆಪಿ ಶಾಸಕ ನಿತೀಶ್ ರಾಣೆ ಅವರು ಬಾಲಿವುಡ್‌ ಸಿನಿಮಾದ ವಿಡಿಯೊವನ್ನು ಟ್ವೀಟ್‌ ಮಾಡಿ, ಪ್ರತೀಕಾರದ ಸುಳಿವು ನೀಡಿದ್ದಾರೆ.

‘ರಾಜನೀತಿ’ ಸಿನಿಮಾದ ಕ್ಲಿಪ್‌ ಅನ್ನು ತನ್ನ ಟ್ವಿಟ್ಟರ್‌ನಲ್ಲಿ ನಿತೀಶ್‌ ಪೋಸ್ಟ್‌ ಮಾಡಿದ್ದಾರೆ. ‘ಮೇಲೆ ಗಾಳಿಯಲ್ಲಿ ಉಗುಳಿದರೆ ಅದು ತಮ್ಮ ಮುಖದ ಮೇಲೆಯೇ ಬೀಳುತ್ತದೆ. ಬಲವಾದ ಪ್ರತಿಕ್ರಿಯೆ ಸಿಗುತ್ತದೆ’ ಎಂದು ಸಿನಿಮಾದಲ್ಲಿ ನಟ ಮನೋಜ್‌ ಬಾಜಪೇಯಿ ಅವರು ಹೇಳಿರುವುದನ್ನು ಪೋಸ್ಟ್‌ ಮಾಡಲಾಗಿದೆ.

ಬಂಧನಕ್ಕೊಳಗಾಗಿ, ಜಾಮೀನು ಪಡೆದಿರುವ ನಾರಾಯಣ ರಾಣೆ ಅವರು ‘ಸತ್ಯಮೇವ ಜಯತೇ’ ಎಂದು ಟ್ವೀಟ್‌ ಮಾಡಿದ್ದಾರೆ. ರಾಣೆ ಅವರ ವಿವಾದಾತ್ಮಕ ಹೇಳಿಕೆ ವಿರುದ್ಧ ಮಹಾರಾಷ್ಟ್ರದ ವಿವಿಧಡೆ ನಾಲ್ಕು ಎಫ್‌ಐಆರ್‌ಗಳು ದಾಖಲಾಗಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.