
ಸಾವು (ಪ್ರಾತಿನಿಧಿಕ ಚಿತ್ರ)
ಆಗ್ರಾ: ತನ್ನ ಮಗಳ ಫೋಟೊಗಳನ್ನು ಇಟ್ಟುಕೊಂಡು ಹೆದರಿಸುತ್ತಿದ್ದ ಎಂದು ವ್ಯಕ್ತಿಯೊಬ್ಬ ತನ್ನ ಸೋದರ ಅಳಿಯನನ್ನು ಕತ್ತು ಹಿಸುಕಿ ಕೊಂದು ಡ್ರಮ್‌ನಲ್ಲಿ ಶವವನ್ನು ಸುಟ್ಟು ಹಾಕಿದ ಘಟನೆ ಆಗ್ರಾದ ಮಲ್ಪುರ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಡಿಸಿಪಿ ಅತುಲ್ ಶರ್ಮಾ ಈ ಕುರಿತು ಮಾಹಿತಿ ನೀಡಿದ್ದು, ‘ಕಳೆದ ವರ್ಷ ಫೆ.18ರಂದು ಘಟನೆ ನಡೆದಿದೆ. ಡ್ರಮ್‌ನಲ್ಲಿ ಪತ್ತೆಯಾದ ಅರ್ಧಸುಟ್ಟ ಮೃತದೇಹದ ಡಿಎನ್‌ಎ ಪರೀಕ್ಷೆ ಮಾಡಿದಾಗ ಸತ್ಯಾಂಶ ತಿಳಿದುಬಂದಿದ್ದು, ಆರೋಪಿ ದೇವಿರಾಮ್ ಎನ್ನುವವರನ್ನು ಸೋಮವಾರ ಬಂಧಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಮೃತ ಯುವಕನನ್ನು ರಾಕೇಶ್ ಎಂದು ಗುರುತಿಸಲಾಗಿದೆ. ದೇವಿರಾಮ್ ರಾಕೇಶ್‌ನನ್ನು ಮತ್ತೊಬ್ಬ ಸೋದರಳಿಯನೊಂದಿಗೆ ಅಂಗಡಿಗೆ ಹೋಗೋಣವೆಂದು ಕರೆದೊಯ್ದು ಕತ್ತು ಹಿಸುಕಿ ಕೊಲೆಗೈದಿದ್ದಾರೆ. ನಂತರ ಮೃತದೇಹವನ್ನು ನೀಲಿ ಬಣ್ಣದ ಡ್ರಮ್‌ನಲ್ಲಿ ತುಂಬಿ, ಜನರ ಓಡಾಟ ಇಲ್ಲದ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಪೆಟ್ರೋಲ್ ಹಾಕಿ ಸುಟ್ಟಿದ್ದಾರೆ. ಘಟನೆ ಬಳಿಕ ಪೊಲೀಸರು ಸಿಕ್ಕ ಅರ್ಧ ಸುಟ್ಟ ಶವವನ್ನು ಡಿಎನ್ಎ ಪರೀಕ್ಷೆ ಮಾಡಿಸಿದ್ದಾರೆ.
ಸದ್ಯ ದೇವಿರಾಮ್‌ನನ್ನು ಬಂಧಿಸಲಾಗಿದ್ದು, ಈತನೊಂದಿಗಿದ್ದ ಇನ್ನೊಬ್ಬ ಸೋದರಳಿಯನನ್ನು ಪತ್ತೆ ಮಾಡಲಾಗುತ್ತಿದೆ. ಪ್ರಕರಣದ ವಿಸ್ತ್ರತ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.