ನವದೆಹಲಿ: ₹3600 ಕೋಟಿ ಹಣ ಅಕ್ರಮ ವರ್ಗಾವಣೆ ಆರೋಪದ ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಪ್ರಕರಣದ ಆರೋಪಿ, ಬ್ರಿಟನ್ ನಾಗರಿಕ ಕ್ರಿಸ್ಟಿಯಾನ್ ಮೈಕೆಲ್ ಜೇಮ್ಸ್ ಅವರು ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಜಾಗೊಳಿಸಿದೆ.
ಆಗಸ್ಟಾ ವೆಸ್ಟ್‌ಲ್ಯಾಂಡ್ ಪ್ರಕರಣದಲ್ಲಿ ದಲ್ಲಾಳಿ ಎಂಬ ಆರೋಪ ಹೊತ್ತಿರುವ ಜೇಮ್ಸ್ ಜಾಮೀನು ಷರತ್ತುಗಳನ್ನು ಮಾರ್ಪಡಿಸಿದ್ದ ದೆಹಲಿ ಹೈಕೋರ್ಟ್ ‘ಜಾಮೀನು ದೊರೆತ ನಂತರ ನೀವು ಎಲ್ಲಿ ನೆಲಸಲು ಉದ್ದೇಶಿಸಿದ್ದೀರಿ. ಆ ಸ್ಥಳದ ವಿಳಾಸವನ್ನು ನೀಡಬೇಕು’ ಎಂದು ಮೇ 22ರಂದು ನಿರ್ದೇಶನ ನೀಡಿತ್ತು.
ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ವಿಕ್ರಮನಾಥ್ ಮತ್ತು ಸಂಜಯ್ ಕುಮಾರ್ ಅವರು ಇದ್ದ ಪೀಠದ ಮುಂದೆ ಜೇಮ್ಸ್ ಅರ್ಜಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.