ಚೆನ್ನೈ (ಪಿಟಿಐ): ಎಐಎಡಿಎಂಕೆ ನಾಯಕ ಓ.ಪನ್ನೀರಸೆಲ್ವಂ (ಒಪಿಎಸ್) ಅವರು ಪಕ್ಷದ ಖಜಾಂಚಿಯಾಗಿ ಮುಂದುವರಿಯಬೇಕೇ ಅಥವಾ ಬೇಡವೇ ಎಂಬುದನ್ನುಮುಂಬರುವ ಸರ್ವ ಸದಸ್ಯರ ಸಭೆ ನಿರ್ಧರಿಸುತ್ತದೆ ಎಂದು ಪ್ರತಿಸ್ಪರ್ಧಿ ಎಡಪ್ಪಾಡಿ ಕೆ ಪಳನಿಸ್ವಾಮಿ (ಇಪಿಎಸ್) ಬಣ ಸೋಮವಾರ ಹೇಳಿದೆ.
ಏಕ ನಾಯಕತ್ವದ ವಿರುದ್ಧ ಚುನಾವಣಾ ಆಯೋಗದ ಮೊರೆ ಹೋಗಿರುವ ಪನ್ನೀರಸೆಲ್ವಂ, ’2021 ರ ಡಿಸೆಂಬರ್ 1 ರಂದು ಪಕ್ಷದ ಬೈಲಾಗಳಿಗೆ ತಿದ್ದುಪಡಿ ಮಾಡಲಾಗಿದೆ. ಸಂಯೋಜಕ ಮತ್ತು ಜಂಟಿ ಸಂಯೋಜಕ, ಪಕ್ಷದ ಉನ್ನತ ನಾಯಕತ್ವವನ್ನು ಪ್ರಾಥಮಿಕ ಸದಸ್ಯರು ಮಾತ್ರ ಚುನಾಯಿಸಬಹುದೆಂದು ಸ್ಪಷ್ಟಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.