ADVERTISEMENT

ಎಐಎಡಿಎಂಕೆ: ಪ್ರಣಾಳಿಕ ಸಿದ್ಧತೆಗೆ 14 ದಿನಗಳ ರಾಜ್ಯ ಪ್ರವಾಸ

ಪಿಟಿಐ
Published 4 ಜನವರಿ 2026, 14:45 IST
Last Updated 4 ಜನವರಿ 2026, 14:45 IST
<div class="paragraphs"><p>ಎಐಎಡಿಎಂಕೆ</p></div>

ಎಐಎಡಿಎಂಕೆ

   

ಚೆನ್ನೈ: ಮುಂಬರುವ ವಿಧಾನಸಭಾ ಚುನಾವಣೆಗಾಗಿ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಲು ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ. ಪಳನಿಸ್ವಾಮಿ ರಚಿಸಿರುವ ಉನ್ನತ ಮಟ್ಟದ ಪ್ರಣಾಳಿಕೆ ಸಮಿತಿಯು ಸಾರ್ವಜನಿಕ ಅಭಿಪ್ರಾಯ ಸಂಗ್ರಹಕ್ಕಾಗಿ ತಮಿಳುನಾಡಿನಾದ್ಯಂತ 14 ದಿನಗಳ ಪ್ರವಾಸ ಕೈಗೊಳ್ಳುತ್ತಿದೆ.

ಜನವರಿ 7ರಿಂದ ಜನವರಿ 20ರವರೆಗೆ ಉನ್ನತ ಮಟ್ಟದ ಸಮಿತಿಯ ಸದಸ್ಯರು ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರವಾಸದ ಸಮಯದಲ್ಲಿ, ಸದಸ್ಯರು ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಅಭಿಪ್ರಾಯಗಳನ್ನು ಸಂಗ್ರಹಿಸಲಿದ್ದಾರೆ. 

ADVERTISEMENT

ಪ್ರವಾಸದ ಆರಂಭಕ್ಕೂ ಮುನ್ನ ‘ನಾದಮ್’ ಆರ್. ವಿಶ್ವನಾಥನ್, ಸಿ. ಪೊನ್ನೈಯನ್ ಮತ್ತು ಆರ್.ಬಿ. ಉದಯಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಉನ್ನತಮಟ್ಟದ ಸಮಿತಿಯು ಶನಿವಾರ ಇಲ್ಲಿನ ಪಕ್ಷದ ಪ್ರಧಾನ ಕಚೇರಿಯಲ್ಲಿ ಪ್ರಣಾಳಿಕೆ ತಯಾರಿಕೆ ಕುರಿತು ಮೊದಲ ಸಭೆ ನಡೆಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.