ADVERTISEMENT

2–18ರ ಮಕ್ಕಳ ಮೇಲಿನ ಕೋವ್ಯಾಕ್ಸಿನ್‌ ಪ್ರಯೋಗಕ್ಕೆ ತಪಾಸಣೆ ಆರಂಭ

ಪಿಟಿಐ
Published 7 ಜೂನ್ 2021, 7:02 IST
Last Updated 7 ಜೂನ್ 2021, 7:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿರುವ ಕೋವಿಡ್‌ ಲಸಿಕೆ ಕೋವಾಕ್ಸಿನ್‌ನ ಪ್ರಯೋಗಕ್ಕಾಗಿ 2 ರಿಂದ 18 ವರ್ಷದೊಳಗಿನ ಮಕ್ಕಳ ತಪಾಸಣೆ ದೆಹಲಿಯ ಏಮ್ಸ್‌ನಲ್ಲಿ ಸೋಮವಾರ ಆರಂಭವಾಗಿದೆ.

ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿರುವ ಈ ಲಸಿಕೆ ಮಕ್ಕಳಿಗೆ ಸೂಕ್ತವೇ ಎಂಬುದನ್ನು ಪರಿಶೀಲಿಸಲು ಪಾಟ್ನಾದ ಏಮ್ಸ್‌ನಲ್ಲಿ ಈಗಾಗಲೇ ಪ್ರಯೋಗ ನಡೆಸಲಾಗಿದೆ.

ಸದ್ಯ ದೆಹಲಿಯ ಏಮ್ಸ್‌ನಲ್ಲಿ ನಡೆಯಲಿರುವ ಪ್ರಯೋಗಕ್ಕೆ ಮಕ್ಕಳ ಪರೀಕ್ಷೆ ಆರಂಭವಾಗಿದ್ದು, ಪರೀಕ್ಷೆ ನಂತರ ಅವರಿಗೆ ಲಸಿಕೆ ನೀಡಲಾಗುತ್ತದೆ.

ADVERTISEMENT

525 ಆರೋಗ್ಯವಂತ ಸ್ವಯಂಸೇವಕರ ಮೇಲೆ ಈ ಪ್ರಯೋಗ ನಡೆಯಲಿದೆ. ಪ್ರಯೋಗದಲ್ಲಿ, 28 ದಿನಗಳ ಅಂತರದಲ್ಲಿ ಎರಡು ಡೋಸ್‌ಗಳನ್ನು ಇಂಟ್ರಾಮಸ್ಕುಲರ್ (ಸ್ನಾಯುವಿನಾಳಕ್ಕೆ) ಮೂಲಕ ನೀಡಲಾಗುತ್ತದೆ.

"ಕೋವಾಕ್ಸಿನ್ ಪ್ರಯೋಗಕ್ಕಾಗಿ ಮಕ್ಕಳ ತಪಾಸಣೆ ಪ್ರಾರಂಭವಾಗಿದೆ. ತಪಾಸಣಾ ವರದಿ ಬಂದ ನಂತರ ಅವರಿಗೆ ಲಸಿಕೆ ನೀಡಲಾಗುತ್ತದೆ,’ ಎಂದು ಏಮ್ಸ್‌ನ ಸಮುದಾಯ ಔಷಧ ಕೇಂದ್ರದ ಪ್ರಾಧ್ಯಾಪಕ ಡಾ.ಸಂಜಯ್ ರೈ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.