ADVERTISEMENT

ಏರ್‌ ಇಂಡಿಯಾ: ₹ 2550 ಕೋಟಿ ಆದಾಯ

ಪಿಟಿಐ
Published 16 ಸೆಪ್ಟೆಂಬರ್ 2020, 12:17 IST
Last Updated 16 ಸೆಪ್ಟೆಂಬರ್ 2020, 12:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ವಂದೇ ಭಾರತ್ ಮಿಷನ್ ಅಡಿಯಲ್ಲಿ ಒದಗಿಸಿದ ವೈಮಾನಿಕ ಸೇವೆಯಿಂದ ಏರ್ ಇಂಡಿಯಾ ಸಂಸ್ಥೆಯು ಆಗಸ್ಟ್‌ 31ರವರೆಗೆ ₹ 2556.60 ಕೋಟಿ ಆದಾಯ ಗಳಿಸಿದೆ’ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯಲು ಈ ವರ್ಷದ ಮಾರ್ಚ್ 23ರವರೆಗೆ ಅಂತರರಾಷ್ಟ್ರೀಯ ವಿಮಾನಸಂಚಾರವನ್ನು ನಿಷೇಧಿಸಲಾಗಿತ್ತು. ವಿವಿಧ ದೇಶಗಳಲ್ಲಿ ಅತಂತ್ರರಾಗಿದ್ದ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರವು ಮೇ 6 ರಿಂದ ಮಿಷನ್ ಪ್ರಾರಂಭಿಸಿತು.

ಆಗಸ್ಟ್‌ 31ರವರೆಗೆ ಒಟ್ಟು 4,505 ವಿಶೇಷ ವಿಮಾನಗಳು ಹಾರಾಟ ನಡೆಸಿವೆ. ನಾಲ್ಕು ಲಕ್ಷ ಜನರನ್ನು ಏರ್‌ ಇಂಡಿಯಾ ಭಾರತಕ್ಕೆ ಕರೆತಂದಿದೆ. 1.9 ಲಕ್ಷ ಪ್ರಯಾಣಿಕರು ವಿಶೇಷ ವಿಮಾನಗಳ ಮೂಲಕ ವಿದೇಶಕ್ಕೆ ತೆರಳಿದ್ದಾರೆ’ ಎಂದು ಸಚಿವರು ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.