ನವದೆಹಲಿ: ಪತನಗೊಂಡ ಏರ್‌ಇಂಡಿಯಾ ವಿಮಾನದ ವಿದ್ಯುತ್ ವ್ಯವಸ್ಥೆಯ ವೈಫಲ್ಯದಿಂದಲೂ ಎಂಜಿನ್‌ಗಳಿಗೆ ಇಂಧನ ಪೂರೈಸುವ ಸ್ವಿಚ್‌ಗಳು ‘ಕಟ್ ಆಫ್’ ಸ್ಥಿತಿ ತಲುಪಿರಬಹುದು ಎಂದು ಕ್ಯಾಪ್ಟನ್ (ನಿವೃತ್ತ) ಎಹಸಾನ್ ಖಾಲಿದ್ ಅವರು ಬುಧವಾರ ಅಭಿಪ್ರಾಯಪಟ್ಟರು.
ವಿಮಾನ ಅಪಘಾತ ತನಿಖಾ ಬ್ಯೂರೊ (ಎಎಐಬಿ) ತನ್ನ ಪ್ರಾಥಮಿಕ ವರದಿಯಲ್ಲಿ, ‘ವಿಮಾನವು ಟೇಕ್‌ಆಫ್ ಆದ ಒಂದೇ ಸೆಕೆಂಡ್‌ನಲ್ಲಿ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಸುವ ಸ್ವಿಚ್‌ಗಳು ‘ಕಟ್ ಆಫ್’ ಆಗಿದ್ದವು. ಇದರಿಂದ ಕಾಕ್‌ಪಿಟ್‌ನಲ್ಲಿ ಗೊಂದಲ ಉಂಟಾಗಿತ್ತು’ ಎಂದು ತಿಳಿಸಿತ್ತು.
ವರದಿಯಲ್ಲಿ ದುರಂತಕ್ಕೆ ಕಾರಣ ಏನು ಎಂಬ ಬಗ್ಗೆ ಅಂತಿಮ ನಿರ್ಣಯ ನೀಡದಿದ್ದರೂ ಪೈಲಟ್‌ಗಳಿಂದಲೇ ತಪ್ಪಾಗಿರುವ ಸಾಧ್ಯತೆ ಇದೆ ಎಂದು ಬೊಟ್ಟು ಮಾಡಲಾಗುತ್ತಿದೆ.
ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಸಂದರ್ಶನದಲ್ಲಿ ಮಾತನಾಡಿದ ಖಾಲಿದ್ ಅವರು, ‘ಎಎಐಬಿಯು ಕಾಕ್‌ಪಿಟ್‌ನ ಪೂರ್ಣ ವಾಯ್ಸ್ ರೆಕಾರ್ಡ್ ಬಿಡುಗಡೆ ಮಾಡಲಿ. ಆಗ ಎಲ್ಲ ಪ್ರಶ್ನೆಗಳಿಗೂ ಉತ್ತರ ಲಭ್ಯವಾಗಲಿದೆ. ಪೈಲಟ್‌ಗಳು ವಿಮಾನದ ಸುರಕ್ಷತೆಯನ್ನು ಬಯಸುವ ಗೋಲ್ ಕೀಪರ್‌ಗಳಂತೆ ನನ್ನ ಕಣ್ಣಿಗೆ ಭಾಸವಾಗುತ್ತಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.