ADVERTISEMENT

ಏರ್‌ ಇಂಡಿಯಾದ ನಾಲ್ಕು ಬೋಯಿಂಗ್ ವಿಮಾನಗಳ ನೋಂದಣಿ ರದ್ದು

ಪಿಟಿಐ
Published 27 ಏಪ್ರಿಲ್ 2022, 18:33 IST
Last Updated 27 ಏಪ್ರಿಲ್ 2022, 18:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವ ದೆಹಲಿ: 2020ರಫೆಬ್ರುವರಿಯಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ, ಏರ್‌ ಇಂಡಿಯಾದ ನಾಲ್ಕು ಬೋಯಿಂಗ್‌ 747 ಜೆಟ್‌ ವಿಮಾನಗಳ ನೋಂದಣಿಯನ್ನು ರದ್ದುಗೊಳಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು (ಡಿಜಿಸಿಎ) ತಿಳಿಸಿದ್ದಾರೆ.

ಬಹಳ ಹಳೆಯದಾಗಿದ್ದ ಈ ವಿಮಾನಗಳಿಗೆ ಭಾರಿ ಪ್ರಮಾಣದ ಇಂಧನದ ಅಗತ್ಯವಿತ್ತು ಹಾಗೂ ಇವುಗಳ ನಿರ್ವಹಣೆಯೂ ವೆಚ್ಚದಾಯಕವಾಗಿತ್ತು ಎಂದು ಡಿಜಿಸಿಎ ಹೇಳಿದೆ.

ಈ ನಾಲ್ಕು ವಿಮಾನಗಳನ್ನು ಏನು ಮಾಡಲಾಗುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.