ADVERTISEMENT

ಕಲ್ಲಿದ್ದಲಿನಿಂದ ವಾಯುಮಾಲಿನ್ಯ: ಮಾರ್ಗಸೂಚಿಗೆ ಚಿಂತನೆ

ಸಲಹೆ ನೀಡುವಂತೆ ಪರಿಸರ ಸಚಿವಾಲಯ ಸೂಚನೆ

ಪಿಟಿಐ
Published 27 ಜನವರಿ 2019, 19:31 IST
Last Updated 27 ಜನವರಿ 2019, 19:31 IST
   

ನವದೆಹಲಿ: ವಿದ್ಯುತ್ ಉತ್ಪಾದನಾ ಘಟಕಗಳು, ಹೆಚ್ಚಿನ ಪ್ರಮಾಣದ ಬೂದಿ ಹೊಮ್ಮಿಸುವ ಕಲ್ಲಿದ್ದಲು ಬಳಸುವುದನ್ನು ನಿಯಂತ್ರಿಸಲುಮಾರ್ಗಸೂಚಿಗಳನ್ನು ರೂಪಿಸಲು‍ಪರಿಸರ ಸಚಿವಾಲಯ ಚಿಂತನೆ ನಡೆಸಿದೆ.

ಈ ನಿಟ್ಟಿನಲ್ಲಿ ಸಲಹೆಗಳನ್ನು ನೀಡುವಂತೆಕಲ್ಲಿದ್ದಲು ಬಳಕೆ ಮಾಡುವ ವಿದ್ಯುತ್ ಉತ್ಪಾದನಾ ಘಟಕಗಳು, ಕಲ್ಲಿದ್ದಲು ಉತ್ಪಾದನಾ ಕಂಪನಿಗಳು ಹಾಗೂ ಕೆಲವು ಪರಿಸರ ಸಂಘಟನೆಗಳಿಗೆ ಸಚಿವಾಲಯದ ಅಧಿಕಾರಿಗಳು ಸೂಚಿಸಿದ್ದಾರೆ.

‘ಹೆಚ್ಚು ಪ್ರಮಾಣದ ಬೂದಿ ಹೊಮ್ಮುವ ಕಲ್ಲಿದ್ದಲು ಬಳಕೆಯಿಂದ ಇಂಗಾಲ, ಗಂಧಕಾಮ್ಲ ಅನಿಲ ಉತ್ಪಾದನೆಯಾಗುತ್ತದೆ. ಇದುಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಉತ್ತಮ ಗುಣಮಟ್ಟದ ಕಲ್ಲಿದ್ದಲು ಬಳಸುವುದರಿಂದ ವಿದ್ಯುತ್ ಘಟಕಗಳ ಕಾರ್ಯಸಾಮರ್ಥ್ಯ ಹೆಚ್ಚುತ್ತದೆ ಜತೆಗೆ ಮಾಲಿನ್ಯಕ್ಕೂ ಕಡಿವಾಣ ಹಾಕಬಹುದು’ ಎಂದು ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ದೇಶದಲ್ಲಿ ಬಳಕೆ ಮಾಡುವ ಶೇ 80ಕ್ಕೂ ಹೆಚ್ಚು ಪ್ರಮಾಣದ ಕಲ್ಲಿದ್ದಲನ್ನು, ಕಲ್ಲಿದ್ದಲು ಸಚಿವಾಲಯದ ಅಡಿಯಲ್ಲಿರುವ ಕೋಲ್ ಇಂಡಿಯಾ ಲಿ. ಉತ್ಪಾದಿಸುತ್ತದೆ. ಈ ಕಲ್ಲಿದ್ದಲು ಗುಣಮಟ್ಟದ ಕುರಿತು ಸರ್ಕಾರಿ ಸ್ವಾಮ್ಯದ ಎನ್‌ಟಿಪಿಸಿ ಸೇರಿದಂತೆ ಹಲವು ಕಂಪನಿಗಳು ದೂರು ಸಲ್ಲಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.