ADVERTISEMENT

ಶೇ 85ರಷ್ಟು ಪ್ರಮಾಣದಲ್ಲಿ ವಿಮಾನಗಳ ಹಾರಾಟಕ್ಕೆ ಅನುಮತಿ

ವಿಮಾನಯಾನ ಸಚಿವಾಲಯದಿಂದ ಆದೇಶ

ಪಿಟಿಐ
Published 18 ಸೆಪ್ಟೆಂಬರ್ 2021, 15:57 IST
Last Updated 18 ಸೆಪ್ಟೆಂಬರ್ 2021, 15:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದಹೆಲಿ:‘ದೇಶೀಯ ವಿಮಾನಯಾನ ಸಂಸ್ಥೆಗಳು ಶೇ 72.5ಕ್ಕೆ ಬದಲಾಗಿ ಶೇ 85ರಷ್ಟು ಪ್ರಮಾಣದಲ್ಲಿ ವಿಮಾನಗಳ ಹಾರಾಟ ನಡೆಸಬಹುದು’ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಶನಿವಾರ ತಿಳಿಸಿದೆ.

ಸಚಿವಾಲಯದ ಆದೇಶದ ಪ್ರಕಾರ, ‘ಆಗಸ್ಟ್‌ 12ರವರೆಗೆ ವಿಮಾನಯಾನ ಸಂಸ್ಥೆಗಳು ಶೇ 72.5ರಷ್ಟು ಪ್ರಮಾಣದಲ್ಲಿ ವಿಮಾನಗಳ ಕಾರ್ಯಾಚರಣೆ ನಡೆಸುತ್ತಿದ್ದವು. ಜುಲೈ 5ರಿಂದ ಆಗಸ್ಟ್‌ 12ರವರೆಗೆ ಈ ಪ್ರಮಾಣವು ಶೇ 64 ಹಾಗೂ ಜೂನ್ 1ರಿಂದ ಜುಲೈ 5ರವರೆಗೆ ಈ ಪ್ರಮಾಣವು ಶೇ 50ರಷ್ಟು ಇತ್ತು’ ಎಂದು ತಿಳಿಸಿದೆ.

ಈ ಸಂಬಂಧ ಶನಿವಾರ ಹೊಸದಾಗಿ ಆದೇಶ ಹೊರಡಿಸಿರುವ ಸಚಿವಾಲಯವು, ಇದೀಗ ಶೇ 85ರಷ್ಟು ಪ್ರಮಾಣದಲ್ಲಿ ವಿಮಾನಯಾನಕ್ಕೆ ಅನುಮತಿ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.