ADVERTISEMENT

ಒತ್ತಡವಿಲ್ಲದೆ ಪರೀಕ್ಷೆ ಎದುರಿಸಿ: ಪ್ರಧಾನಿ ಸಲಹೆ

ಪಿಟಿಐ
Published 15 ಫೆಬ್ರುವರಿ 2020, 20:45 IST
Last Updated 15 ಫೆಬ್ರುವರಿ 2020, 20:45 IST
 ನರೇಂದ್ರ ಮೋದಿ
ನರೇಂದ್ರ ಮೋದಿ    

ನವದೆಹಲಿ: ಸಿಬಿಎಸ್‌ಇ ಹತ್ತನೇ ಹಾಗೂ ಹನ್ನೆರಡನೇ ತರಗತಿ ಪರೀಕ್ಷೆಗಳು ಶನಿವಾರದಿಂದ ಆರಂಭವಾಗಿದ್ದು, ‘ಒತ್ತಡವಿಲ್ಲದೆ ಸಂತಸದಿಂದ ಪರೀಕ್ಷೆ ಎದುರಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳನ್ನು ‘ಪರೀಕ್ಷಾ ಹೋರಾಟಗಾರರು’ ಎಂದು ಕರೆದಿರುವ ಪ್ರಧಾನಿ, ತಿಂಗಳುಗಟ್ಟಲೆ ವಹಿಸಿದ ಶ್ರಮ ಹಾಗೂ ಮಾಡಿಕೊಂಡ ಸಿದ್ಧತೆ ‘ಖಂಡಿತಾ ಉತ್ತಮ ಫಲಿತಾಂಶವನ್ನೇ ಕೊಡುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.

‘ನನ್ನ ಕಿರಿಯ ಸ್ನೇಹಿತರಿಗೆ, ಅವರ ಪೋಷಕರಿಗೆ ಹಾಗೂ ಶಿಕ್ಷಕರಿಗೆ ಒಳಿತಾಗಲಿ’ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.