ADVERTISEMENT

ಲೋಕಸಭೆ ಚುನಾವಣೆ 2024: ಅಮೇಥಿಯಲ್ಲಿ ಎಸ್‌ಪಿ ಸ್ಪರ್ಧಿಸಬಹುದು– ಅಖಿಲೇಶ್

ಪಿಟಿಐ
Published 6 ಮಾರ್ಚ್ 2023, 13:04 IST
Last Updated 6 ಮಾರ್ಚ್ 2023, 13:04 IST
   

ಲಖನೌ: ಮುಂಬರುವ ಲೋಕಸಭೆ ಚುಣಾವಣೆಯಲ್ಲಿ ಅಮೇಥಿ ಕ್ಷೇತ್ರದಿಂದ ಸಮಾಜವಾದಿ ಪಕ್ಷ (ಎಸ್‌ಪಿ) ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂಬ ಸುಳಿವನ್ನು ಅಖಿಲೇಶ್‌ ಯಾದವ್‌ ನೀಡಿದ್ದಾರೆ.

ಮಾಜಿ ಸಚಿವರ ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಅಮೇಥಿಗೆ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸೂಚನೆ ನೀಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎಸ್‌ಪಿ ಪಕ್ಷ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರಲಿಲ್ಲ. ಇಲ್ಲಿ ರಾಹುಲ್‌ ಗಾಂಧಿ ಅವರು ಸ್ಮೃತಿ ಇರಾನಿ ವಿರುದ್ಧ ಗೆಲುವು ದಾಖಲಿಸಿದ್ದರು.

ಮುಂದಿನ ಚುನಾವಣೆಯಲ್ಲಿ ಅಮೇಥಿ ಜನರು ದೊಡ್ಡ ವ್ಯಕ್ತಿಗಳನ್ನು ಆಯ್ಕೆ ಮಾಡುವುದಿಲ್ಲ, ವಿಶಾಲ ಹೃದಾಯ ಇರುವವರನ್ನು ಆಯ್ಕೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ಕಾಂಗ್ರೆಸ್‌ ಪಕ್ಷ ಅಮೇಥಿ ನನ್ನ ಪಾಕೇಟ್‌ನಲ್ಲಿದೆ ಎಂದು ಭಾವಿಸಿತ್ತು. ಇದು ಇನ್ನು ಮುಂದೆ ನಡೆಯುವುದಿಲ್ಲ ಎಂದು ಅಖಿಲೇಶ್‌ ಯಾದವ್‌ ಹೇಳಿದ್ದಾರೆ.

ಅಮೇಥಿಯಲ್ಲಿ ಬಡ ಮಹಿಳೆಯರ ದುಃಸ್ಥಿತಿಯನ್ನು ನೋಡಿ ನನಗೆ ತುಂಬಾ ಬೇಸರವಾಗಿದೆ. ದೊಡ್ಡ ವ್ಯಕ್ತಿಗಳು ಯಾವಾಗಲೂ ಇಲ್ಲಿ ಗೆದ್ದಿದ್ದಾರೆ ಮತ್ತು ಸೋತಿದ್ದಾರೆ, ಆದರೂ ಇಲ್ಲಿನ ಬಡತನ ಪರಿಸ್ಥಿತಿ ಹಾಗೆಯೇ ಮುಂದುವರೆದಿದೆ. ಇಲ್ಲೇ ಹೀಗಾದರೆ ಇನ್ನು ರಾಜ್ಯದ ಕಥೆ ಏನು? ಎಂದಿದ್ದಾರೆ.

ನೆಲದ ಮೇಲೆ ಕುಳಿತಿರುವ ಬಡ ಮಹಿಳೆಯರ ಫೋಟೊಗಳನ್ನು ಅಖಿಲೇಶ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.