ADVERTISEMENT

ಮನೆ ಕಳೆದುಕೊಂಡ 8 ವರ್ಷದ ಬಾಲಕಿಗೆ ಶೈಕ್ಷಣಿಕ ನೆರವು: ಅಖಿಲೇಶ್‌ ಯಾದವ್‌ ಭರವಸೆ

ಪಿಟಿಐ
Published 4 ಏಪ್ರಿಲ್ 2025, 12:48 IST
Last Updated 4 ಏಪ್ರಿಲ್ 2025, 12:48 IST
<div class="paragraphs"><p>ಅಖಿಲೇಶ್‌ ಯಾದವ್‌</p></div>

ಅಖಿಲೇಶ್‌ ಯಾದವ್‌

   

ಲಖನೌ: ಉತ್ತರ ಪ್ರದೇಶದಲ್ಲಿ ಕಳೆದ ತಿಂಗಳು ನಡೆದ ಬುಲ್ಡೋಜರ್ ಕಾರ್ಯಾಚರಣೆಯ ಸಂದರ್ಭದಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳು ತನ್ನ ಪುಸ್ತಕಗಳನ್ನು ರಕ್ಷಿಸಿಕೊಳ್ಳುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಹರಿದಾಡಿತ್ತು. ಇದು ಸುಪ್ರೀಂ ಕೋರ್ಟ್‌ನ ಗಮನವನ್ನು ಸೆಳೆದಿತ್ತು.

ಈ ನಡುವೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌, ಎಂಟು ವರ್ಷದ ಅನನ್ಯರ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ.

ADVERTISEMENT

'ಶಿಕ್ಷಣ ಪಡೆಯದವರಿಗೆ ಶಿಕ್ಷಣದ ಬೆಲೆ ತಿಳಿದಿರುವುದಿಲ್ಲ. ಮಕ್ಕಳ ಭವಿಷ್ಯವನ್ನು ಹಾಳು ಮಾಡುವವರು ನಿಜವಾಗಿಯೂ ನಿರಾಶ್ರಿತರು' ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ ಅಖಿಲೇಶ್‌ ವಾಗ್ದಾಳಿ ನಡೆಸಿದ್ದರು.

ಅಂಬೇಡ್ಕರ್‌ ನಗರದಲ್ಲಿ ಅತಿಕ್ರಮಣ ಅಥವಾ ಒತ್ತುವರಿಯಾದ ಜಾಮೀನುಗಳಲ್ಲಿ ನಿರ್ಮಿಸಿಕೊಂಡಿರುವ ಮನೆಗಳನ್ನು ಬುಲ್ಡೋಜರ್ ಕಾರ್ಯಾಚರಣೆಯ ಮೂಲಕ ರಾಜ್ಯ ಸರ್ಕಾರ ನೆಲಸಮಗೊಳಿಸಿತು. ಈ ವೇಳೆ ತನ್ನ ಗುಡಿಸಲು ನೆಲಸಮಗೊಳ್ಳಿಸುವ ಮುನ್ನ ತನ್ನ ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಬಾಲಕಿಯೊಬ್ಬಳು ಓಡಿ ಹೋಗುತ್ತಿರುವ ದೃಶ್ಯಗಳು ವಿಡಿಯೊದಲ್ಲಿದೆ. ಈ ವಿಡಿಯೊ ಭಾರಿ ಹರಿದಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.