ADVERTISEMENT

ಶಬರಿಮಲೆ ದೇಗುಲಕ್ಕೆ ಎಲ್ಲ ಧರ್ಮದವರೂ ಹೋಗಬಹುದು: ಕೇರಳ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 9:38 IST
Last Updated 29 ಅಕ್ಟೋಬರ್ 2018, 9:38 IST
ಕೃಪೆ: ಪಿಟಿಐ
ಕೃಪೆ: ಪಿಟಿಐ   

ಕೊಚ್ಚಿ: ಶಬರಿಮಲೆ ದೇಗುಲ ಧರ್ಮ ಸಾಮರಸ್ಯದ ಪ್ರತೀಕವಾಗಿದೆ. ಈ ದೇವಾಲಯ ಎಲ್ಲರಿಗೂ ಸೇರಿದ್ದು. ಯಾವ ರೀತಿಯ ಭಕ್ತರು ಬಂದರೂ ಅವರಿಗೆ ರಕ್ಷಣೆ ನೀಡಬೇಕು. ಇರುಮುಡಿ ಇಲ್ಲದೆಯೂ ಶಬರಿಮಲೆಗೆ ಹೋಗಬಹುದು.ಹದಿನೆಂಟು ಮೆಟ್ಟಿಲು ಹತ್ತುವುದಾದರೆ ಮಾತ್ರ ಇರುಮುಡಿ ಕಡ್ಡಾಯ. ಇರುಮುಡಿ ಇಲ್ಲದೇ ಇದ್ದವರು ದೇವಸ್ಥಾನದ ಇನ್ನೊಂದು ಬಾಗಿಲು ಮೂಲಕ ಪ್ರವೇಶಿಸಬೇಕು. ಇದು ದೇವಾಲಯದಲ್ಲಿ ಇಷ್ಟು ವರ್ಷಗಳಿಂದ ನಡೆದುಕೊಂಡು ಬಂದ ರೀತಿಯಾಗಿದೆ ಎಂದು ಕೇರಳಹೈಕೋರ್ಟ್ ಹೇಳಿದೆ.

ಹಿಂದೂ ಧರ್ಮದವರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶ ನೀಡಬೇಕೆಂಬ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯದಲ್ಲಿರುವ ಧರ್ಮ ಸಾಮರಸ್ಯಕ್ಕೆ ಕೆಡುಕುಂಟು ಮಾಡುವ ರೀತಿಯಲ್ಲಿ ಈ ಅರ್ಜಿ ಇದೆ. ಸರ್ವ ಧರ್ಮದವರಿಗೂ ದೇವಾಲಯದಲ್ಲಿ ಪ್ರವೇಶವಿದೆ ಎಂದು ಹೇಳಿದ ಕೋರ್ಟ್ ಅರ್ಜಿ ಸಲ್ಲಿಸಿದ ಬಿಜೆಪಿಯ ಟಿ.ಜಿ ಮೋಹನ್‍ ದಾಸ್ ಅವರ ಬಗ್ಗೆ ಅಸಮದಾನ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT