ಟೋಕಿಯೊ (ಪಿಟಿಐ): ಭಾರತದ ಸಂಸದೀಯ ನಿಯೋಗವೊಂದು ಜಪಾನ್‌ನ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷದ (ಎಲ್‌ಡಿಪಿ) ಸದಸ್ಯರನ್ನು ಶುಕ್ರವಾರ ಭೇಟಿ ಮಾಡಿ, ಭಯೋತ್ಪಾದನೆ ವಿರುದ್ಧ ಭಾರತದ ದೃಢ ಮತ್ತು ಏಕೀಕೃತ ನಿಲುವನ್ನು ವಿವರಿಸಿತು.
ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಪಾಕಿಸ್ತಾನದ ಬಗ್ಗೆ ಜಾಗತಿಕ ನಾಯಕತ್ವಕ್ಕೆ ತಿಳಿಸಿಕೊಡುವ ಉದ್ದೇಶದಿಂದ ಜೆಡಿಯು ಸಂಸದ ಸಂಜಯ್ ಝಾ ಅವರ ನೇತೃತ್ವದ ಸರ್ವ ಪಕ್ಷಗಳ ನಿಯೋಗವು ಜಪಾನ್‌ಗೆ ತೆರಳಿದೆ.
ಭಾರತದ ನಿಯೋಗವು ಎಲ್‌ಡಿಪಿ ಪಕ್ಷದ ಭಯೋತ್ಪಾದನೆ ವಿರೋಧಿ ಸಂಶೋಧನಾ ಸಮಿತಿಯ ಹಂಗಾಮಿ ಮುಖ್ಯಸ್ಥ ಯಸುಹಿರೊ ಹನಾಶಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತು. ಹನಾಶಿ ಅವರು ಮತ್ತು ನಿಯೋಗವು ಭಯೋತ್ಪಾದನೆ ವಿರುದ್ಧದ ಶೂನ್ಯ ಸಹಿಷ್ಣುತೆ ನಿಲುವನ್ನು ಒತ್ತಿ ಹೇಳಿತು ಎಂದು ಜಪಾನ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ‘ಎಕ್ಸ್’ನಲ್ಲಿ ತಿಳಿಸಿದೆ.
ನಿಯೋಗವು ಗುರುವಾರ ಜಪಾನ್ ವಿದೇಶಾಂಗ ಸಚಿವ ಟಕೇಶಿ ಇವಾಯಾ ಅವರನ್ನು ಭೇಟಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.