ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ಅತ್ಯಾಚಾರ ಪ್ರಕರಣದ ಆರೋಪಿ ಕೇಂದ್ರದ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದ್ ಅವರಿಗೆ ಮುಂದಿನ ವಿಚಾರಣೆವರೆಗೂ ಅಲಹಾಬಾದ್ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ.
ಈ ಕುರಿತು ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಸಂತ್ರಸ್ತೆ ಹಾಗೂ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಸಮಿತ್ ಗೋಪಾಲ್ ಅವರು ಸೋಮವಾರ ಈ ಆದೇಶ ನೀಡಿದ್ದಾರೆ. ‘75 ವರ್ಷದ ಸ್ವಾಮಿ ಚಿನ್ಮಯಾನಂದ್ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ.
ಅವರಿಗೆ ಯಾವುದೇ ಅಪರಾಧದ ಇತಿಹಾಸ ಇಲ್ಲ. ಜೊತೆಗೆ, ಅವರು ಉತ್ತಮ ಅಧ್ಯಾತ್ಮಿಕ ಹಾಗೂ ರಾಜಕೀಯ ಮೌಲ್ಯ ಉಳ್ಳವರಾಗಿದ್ದಾರೆ’ ಎಂದುಚಿನ್ಮಯಾನಂದ್ ಅವರ ಪರ ವಕೀಲ ಅನೂಪ್ ತ್ರಿವೇದಿ ವಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.