ADVERTISEMENT

ಮೋದಿಯ ನವ ಭಾರತ ‘ಕ್ರೂರ ಭಾರತ’: ರಾಹುಲ್ ಗಾಂಧಿ 

​ಪ್ರಜಾವಾಣಿ ವಾರ್ತೆ
Published 23 ಜುಲೈ 2018, 14:44 IST
Last Updated 23 ಜುಲೈ 2018, 14:44 IST
   

ನವದೆಹಲಿ: ರಾಜಸ್ಥಾನದ ಅಲ್ವರ್‌ನಗುಂಪುದಾಳಿಯಲ್ಲಿ ಸಾವಿಗೀಡಾಗಿದ್ದ ಅಕ್ಬರ್‌ ಖಾನ್‌ ಪ್ರಕರಣ ಸಂಬಂಧ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ಟ್ವೀಟ್‌ ಸಮರ ಆರಂಭವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಮೇಲೆ ಕಿಡಿಕಾರಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ, ಮೋದಿ ಅವರ ನವ ಭಾರತ ಘೋಷಣೆಯನ್ನು ’ಕ್ರೂರ ನವ ಭಾರತ’ ಎಂದು ಕರೆದಿದ್ದಾರೆ. ಹಸುಕಳವು ಶಂಕೆಯಲ್ಲಿ ಶುಕ್ರವಾರ ರಾತ್ರಿ ಅಕ್ಬರ್ ಖಾನ್ ಅವರ ಮೇಲೆ ಗುಂಪುದಾಳಿ ನಡೆದಿತ್ತು. ಇದರಲ್ಲಿ ಈತ ಮೃತಪಟ್ಟಿದ್ದರು.

ಈ ಪ್ರಕರಣದಲ್ಲಿ ಬಿಜೆಪಿಯವರನ್ನು ಪ್ರಶ್ನಿಸಿ ಟ್ವೀಟ್ ಮಾಡಿರುವ ರಾಹುಲ್, ’6 ಕಿ.ಮೀ ದೂರದಲ್ಲಿರುವ ಆಸ್ಪತ್ರೆಗೆ ಅಕ್ಬರ್‌ನನ್ನು ಕರೆದುಕೊಂಡು ಹೋಗಲು ಪೊಲೀಸರು 3 ಗಂಟೆ ತೆಗೆದುಕೊಂಡಿದ್ದಾರೆ. ಯಾಕೆ ಮಾರ್ಗ ಮಧ್ಯೆ ಟೀ ಬ್ರೆಕ್‌ ತೆಗೆದುಕೊಂಡಿದ್ದೀರಾ?... ಇದು ಮೋದಿ ಅವರ ಕ್ರೂರ ನವ ಭಾರತ. ಇವರ ನವ ಭಾರತದ ಪರಿಕಲ್ಪನೆಯಲ್ಲಿ ಮಾನವೀಯತೆಯ ಸ್ಥಾನವನ್ನು ಹಗೆತನ, ದ್ವೇಷಗಳು ಆವರಿಸಿಕೊಂಡಿವೆ. ಅಮಾಯಕರನ್ನು ಸದೆ ಬಡಿಯಾಗುತ್ತಿದೆ. ಸಾಕಷ್ಟು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ರಾಹುಲ್ ಗಾಂಧಿ ಅವರಟ್ವೀಟ್‌ಗೆಉತ್ತರಿಸಿರುವ ಕೇಂದ್ರ ಹಣಕಾಸು ಸಚಿವ ಪಿಯೂಷ್ ಗೋಯಲ್, ಪ್ರತಿಬಾರಿ ಅಪರಾಧ ನಡೆದಾಗಲೂ ಸಂತೋಷ ಪಡುವ ಪ್ರವೃತ್ತಿಯನ್ನು ನಿಲ್ಲಿಸಿರಾಜ್ಯ ಸರ್ಕಾರ ಈಗಾಗಲೇ ಈ ಘಟನೆ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.ರಾಹುಲ್ ನೀವು ಮುಂದಿನ ಚುನಾವಣೆಯಮತ ಲಾಭಕ್ಕಾಗಿರಾಜ್ಯವನ್ನು ಇಬ್ಭಾಗ ಮಾಡುತ್ತಿದ್ದೀರಿ.ಮೊಸಳೆ ಕಣ್ಣೀರು ಸುರಿಸುತ್ತಿದ್ದೀರಿ. ಸಾಕು ನಿಲ್ಲಿಸಿ. ನೀವು ವ್ಯಾಪಾರಿ ದ್ವೇಷಿ ಎಂದು ಟ್ವೀಟ್ ಮಾಡಿದ್ದಾರೆ.

ಮಾಹಿತಿ ಮತ್ತು ಪ್ರಸಾರಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, ರಾಹುಲ್ ಅವರೇ, ಅಪರಾಧ ಪ್ರಕರಣಗಳನ್ನು ರಾಜಕೀಯ ಲಾಭಕ್ಕಾಗಿಬಳಸಿಕೊಳ್ಳುವುದನ್ನು ನಿಲ್ಲಿಸಿ. ಸ್ಥಳಿಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಖಂಡಿತವಾಗಿಯೂ ನ್ಯಾಯ ಸಿಗುತ್ತದೆ. ಕೆಲವೇ ಮತಗಳಿಕೆಗಾಗಿಸಮಾಜದಲ್ಲಿ ವಿಷ ಬೀಜ ಬಿತ್ತುವುದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.

ADVERTISEMENT

ಇದನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.