ADVERTISEMENT

ಅಮರೀಂದರ್‌ ಸಿಂಗ್‌–ನವಜೋತ್‌ ಸಿಂಗ್‌ ಸಿಧು ಭೇಟಿ ನಾಳೆ

ಪಿಟಿಐ
Published 16 ಮಾರ್ಚ್ 2021, 8:56 IST
Last Updated 16 ಮಾರ್ಚ್ 2021, 8:56 IST
ಅಮರಿಂದರ್‌ ಸಿಂಗ್‌ ಮತ್ತು ನವಜೋತ್‌ ಸಿಂಗ್‌ ಸಿಧು
ಅಮರಿಂದರ್‌ ಸಿಂಗ್‌ ಮತ್ತು ನವಜೋತ್‌ ಸಿಂಗ್‌ ಸಿಧು   

ಚಂಡೀಗಡ: ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಅವರು ಮಾಜಿ ಸಚಿವ ನವಜೋತ್‌ ಸಿಂಗ್‌ ಸಿಧು ಅವರನ್ನು ಬುಧವಾರ ಭೇಟಿಯಾಗಲಿದ್ದಾರೆ.

ಈ ಭೇಟಿ ಚರ್ಚೆಗೆ ಗ್ರಾಸವಾಗಿದ್ದು, 2022ರ ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ನವಜೋತ್‌ ಸಿಂಗ್‌ ಸಿಧು ಪ್ರಮುಖ ‍ಪಾತ್ರ ವಹಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಬುಧವಾರ ಮಧ್ಯಾಹ್ನ ಭೋಜನ ಸಮಯದಲ್ಲಿ ಉಭಯ ನಾಯಕರು ಭೇಟಿಯಾಗಲಿದ್ದಾರೆ. ಕಳೆದ ವರ್ಷ ನವೆಂಬರ್‌ ತಿಂಗಳಲ್ಲೂ ನಾಯಕರಿಬ್ಬರು ಭೇಟಿಯಾಗಿದ್ದರು. ಈ ವೇಳೆ ಭವಿಷ್ಯದಲ್ಲೂ ಇಂತಹ ಸಭೆಗಳನ್ನು ನಡೆಸುವುದಾಗಿ ಅಮರಿಂದರ್‌ ಸಿಂಗ್‌ ಹೇಳಿದ್ದರು.

ADVERTISEMENT

2019ರಲ್ಲಿ ನವಜೋತ್‌ ಸಿಂಗ್‌ ಸಿಧು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಕಾಂಗ್ರೆಸ್‌ ಮತ್ತೆ ಸಿಧು ಅವರನ್ನು ಪಕ್ಷಕ್ಕೆ ವಾಪಾಸ್‌ ಕರೆತರಲು ಪ್ರಯತ್ನಿಸುತ್ತಿದೆ. ಈ ದೃಷ್ಟಿಯಲ್ಲಿ ಅಮರೀಂದರ್‌ ಸಿಂಗ್‌ ಮತ್ತು ನವಜೋತ್ ಸಿಂಗ್‌ ಸಿಧು ಅವರ ಭೇಟಿಯು ಬಹಳ ಕುತೂಹಲವನ್ನು ಕೆರಳಿಸಿದೆ.

ಕಾಂಗ್ರೆಸ್‌ ನಾಯಕ, ಪಂಜಾಬ್‌ನ ಹರೀಶ್ ರಾವತ್ ಅವರು ಸಿಧುಗೆ ಪ್ರಮುಖ ಸ್ಥಾನ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ. ನವಜೋತ್‌ ಸಿಂಗ್‌ ಸಿಧುಗೆ ರಾಜ್ಯ ಸಚಿವ ಸಂಪುಟದಲ್ಲಿ ಪ್ರಮುಖ ಸ್ಥಾನವನ್ನು ನೀಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.