ADVERTISEMENT

ಅಮರನಾಥ ಯಾತ್ರಾರ್ಥಿಗಳ ಮೇಲೆ ದಾಳಿ: ಉಗ್ರ ಸಂಘಟನೆ ಬೆದರಿಕೆ

ಯಾತ್ರೆಯು ರಾಜಕೀಯ ದುರುದ್ದೇಶ, ಜನ ಸಮುದಾಯದ ಪ್ರಚೋದನೆಗೆ ಬಳಕೆಯಾದರೆ ಮಾತ್ರ ದಾಳಿ: ಟಿಆರ್‌ಎಫ್‌

​ಪ್ರಜಾವಾಣಿ ವಾರ್ತೆ
Published 23 ಮೇ 2022, 15:50 IST
Last Updated 23 ಮೇ 2022, 15:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಬಿಜೆಪಿ ಸರ್ಕಾರವು ಕಾಶ್ಮೀರದ ಪ್ರಸಿದ್ಧ ಅಮರನಾಥ ಯಾತ್ರೆಯನ್ನು ತನ್ನ ರಾಜಕೀಯ ದುರುದ್ದೇಶ ಹಾಗೂ ಜನ ಸಮುದಾಯವನ್ನು ಪ್ರಚೋದಿಸುವ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿರುವುದರ ವಿರುದ್ಧ ಟಿಆರ್‌ಎಫ್‌ (ದಿ ರಿಸಿಸ್ಟೆನ್ಸ್‌ ಫ್ರಂಟ್‌) ಉಗ್ರ ಸಂಘಟನೆ ಬೆದರಿಕೆ ಪತ್ರ ಬರೆದಿರುವ ಕುರಿತು ವರದಿಯಾಗಿದೆ.

‘ದಕ್ಷಿಣ ಕಾಶ್ಮೀರದ ಹಿಮಾಲಯದ 3800 ಮೀಟರ್‌ ಎತ್ತರದ ಪ್ರದೇಶದಲ್ಲಿರುವ ಪವಿತ್ರ ಈ ಗುಹಾ ದೇವಾಲಯದ ವಾರ್ಷಿಕ ಯಾತ್ರೆಯು ಜೂನ್‌ 30ರಂದು ಆರಂಭವಾಗಲಿದ್ದು, ಕ್ಕೆ ಈ ವರ್ಷ ಆರರಿಂದ 6–8 ಲಕ್ಷ ದಾಖಲೆಯ ಯಾತ್ರಾರ್ಥಿಗಳು ದರ್ಶನ ಪಡೆಯುವ ಸಂಭವವಿದೆ’ ಎಂದು ಅಂದಾಜಿಸಲಾಗಿದೆ.

ದಾಳಿಯ ಕುರಿತ ಬೆದರಿಕೆ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ‘ಯಾತ್ರೆಯನ್ನು ರಾಜಕೀಯ ಮತ್ತು ಸಮುದಾಯದಲ್ಲಿ ಒಡಕು ಮೂಡಿಸುವ ಉದ್ದೇಶಕ್ಕಾಗಿ ಬಳಸಿದರೆ ಪ್ರತಿರೋಧ ದಳವಾದ ನಾವು ಅಂತಹ ಮೂಲಭೂತವಾದಿ ಸಂಘದ ಕೊಳಕು ಉದ್ದೇಶವನ್ನು ಖಂಡಿತ ತಡೆಯುತ್ತೇವೆ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತೇವೆ’ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಿದೆ.

ADVERTISEMENT

‘ಯಾವುದೇ ಯಾತ್ರಾರ್ಥಿಯು ಕಾಶ್ಮೀರ ಸಮಸ್ಯೆ ಸಂಬಂಧ ತಲೆಹಾಕದೇ ಯಾತ್ರೆಗಷ್ಟೆ ಸೀಮಿತವಾಗುವ ಯಾತ್ರಾರ್ಥಿಗಳಿಗೆ ನಾವು ಸೂಕ್ತ ರಕ್ಷಣೆ ನೀಡುತ್ತೇವೆ. ಸಂಘದ ದುರುಳರು ಯಾತ್ರಾರ್ಥಿಗಳ ವೇಷದಲ್ಲಿ ಬಂದರೆ ಅದರ ಪರಿಣಾಮ ಬೇರೆಯೇ ಆಗುತ್ತದೆ’ ಎಂದು ಹೇಳಿದೆ.

‘ಮೂಲಭೂತವಾದಿ ಸಂಘಿಗಳ ದಾಳವಾಗಿ ಯಾವುದೇ ವ್ಯಕ್ತಿಯು ಜಮ್ಮು–ಕಾಶ್ಮೀರದಲ್ಲಿದ್ದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ.ಇದನ್ನು ಮನವರಿಕೆ ಮಾಡಿಕೊಂಡು ಕೇಸರಿ ಸಂಘಟನೆಯ ಮೂಲಭೂತವಾದಿಗಳ ಉದ್ರೇಕಿತ ಮಾತುಗಳಿಂದ ಪ್ರಚೋದಿತರಾದರೆ ಕಾಶ್ಮೀರಿ ಪಂಡಿತರ ಹಾಗೆ ಹರಕೆಯ ಕುರಿ ಆಗಬೇಕಾಗುತ್ತದೆ’ ಎಂದೂ ಪತ್ರದಲ್ಲಿ ಹೇಳಲಾಗಿದೆ.

‘ಯಾವುದೇ ಧರ್ಮವನ್ನು ನಾವು ವಿರೋಧಿಸುವುದಿಲ್ಲ. ಆದರೆ ಯಾವುದೇ ಧಾರ್ಮಿಕ ಸಂಸ್ಥೆಯು ಕಾಶ್ಮೀರಿಗಳ ಹೋರಾಟದ ವಿರುದ್ಧ ನಿಂತರೆ ಅಂತಹ ಶಕ್ತಿಗಳ ವಿರುದ್ಧ ಹೋರಾಟ ಇದ್ದೆ ಇರುತ್ತದೆ’ ಎಂದು ಹೇಳಿದೆ.

ಈ ನಡುವೆ ಟಿಆರ್‌ಎಫ್‌ನ ಅಂಗಸಂಘಟನೆಯಾದ ಪಾಕಿಸ್ತಾನ ಮೂಲದ ಲಷ್ಕರ್‌–ಎ–ತೈಯಬಾ (ಎಲ್‌ಇಟಿ)ಯು, ‘ಯಾತ್ರೆಯು ಸಂಪ್ರದಾಯಿಕವಾಗಿ ನೆರವೇರಿದರೆ ಯಾತ್ರಾರ್ಥಿಗಳಿಗೆ ಸೂಕ್ತ ರಕ್ಷಣೆ ಒದಗಿಸಲಾಗುವುದು’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.